ಬೆಂಗಳೂರು: ಪಿಯುಸಿ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯ ಶೈಕ್ಷಣಿಕ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.
ಬಾಲಕಿಯರ ಭರ್ಜರಿ ಸಾಧನೆ: ಎಂದಿನಂತೆ ಈ ಬಾರಿಯೂ ಟಾಪರ್ಸ್ ಲಿಸ್ಟ್‌ನಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ಮೂರೂ ವಿಭಾಗಗಳಲ್ಲಿ ಹೆಣ್ಣುಮಕ್ಕಳದ್ದೇ ದರ್ಬಾರ್
ದಾಖಲೆ ಬರೆದ ಫಲಿತಾಂಶ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಬರೋಬ್ಬರಿ ಶೇ. 12.55 ಏರಿಕೆ ಕಂಡಿದೆ. ಒಟ್ಟಾರೆ ಶೇ. 86 ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ ಇತಿಹಾಸ ಬರೆದಿದ್ದಾರೆ.
ಪಾಸ್ ಆದವರು ಎಷ್ಟು?:
ಪರೀಕ್ಷೆ ಬರೆದ 7.10 ಲಕ್ಷ ವಿದ್ಯಾರ್ಥಿಗಳಲ್ಲಿ 6,10,000 ವಿದ್ಯಾರ್ಥಿಗಳು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.
ವಿಭಾಗವಾರು ಲೆಕ್ಕಾಚಾರ: ವಿಜ್ಞಾನ: 2.92 ಲಕ್ಷ ವಿದ್ಯಾರ್ಥಿಗಳು.
ವಾಣಿಜ್ಯ: 2.11 ಲಕ್ಷ ವಿದ್ಯಾರ್ಥಿಗಳು.
ಕಲಾ ವಿಭಾಗ: 1.42 ಲಕ್ಷ ವಿದ್ಯಾರ್ಥಿಗಳು.
ಯಾರು ಟಾಪರ್ಸ್?:
ವಾಣಿಜ್ಯ ವಿಭಾಗ (Commerce):
ದಕ್ಷಿಣ ಕನ್ನಡದ ಆಳ್ವಾಸ್ ಕಾಲೇಜಿನ ದಿಶಾ ಬರೋಬ್ಬರಿ 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ಪರ್ಫೆಕ್ಟ್ ಸ್ಕೋರ್ ಸಾಧಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ
ಕಲಾ ವಿಭಾಗ (Arts):
ಕೊಟ್ಟೂರಿನ ಅರ್ಚನಾ ಅವರು 600ಕ್ಕೆ 598 ಅಂಕಗಳನ್ನು ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ
ಒಟ್ಟಾರೆ ಫಲಿತಾಂಶ:
ಈ ಬಾರಿ ರಾಜ್ಯದ ಒಟ್ಟಾರೆ ಉತ್ತೀರ್ಣ ಪ್ರಮಾಣ ದಾಖಲೆ ಮಟ್ಟದ ಶೇ. 86ರಷ್ಟಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಸಾಧನೆಯ ಶಿಖರ ಏರಿದ್ದಾರೆ.

