HomeKarnatakaBREAKING : ಕರ್ನಾಟಕ 'ದ್ವಿತೀಯ PUC' ಫಲಿತಾಂಶ ಪ್ರಕಟ, ಈ ಬಾರಿ ಶೇ. 86...

BREAKING : ಕರ್ನಾಟಕ ‘ದ್ವಿತೀಯ PUC’ ಫಲಿತಾಂಶ ಪ್ರಕಟ, ಈ ಬಾರಿ ಶೇ. 86 % ವಿದ್ಯಾರ್ಥಿಗಳು ಪಾಸ್, ಬಾಲಕಿಯರದ್ದೇ ಮೇಲುಗೈ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ (ಪರೀಕ್ಷೆ-1) ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ತಿಂಗಳುಗಳ ಕಾಯುವಿಕೆಗೆ ತೆರೆ ಬಿದ್ದಿದ್ದು, ಇಂದಿನಿಂದಲೇ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾಗಿದೆ. ಈ ಬಾರಿ ಶೇ. 86 % ವಿದ್ಯಾರ್ಥಿಗಳು ಪಾಸ್ ಆಗಿದ್ದು, ಬಾಲಕಿಯರೇ  ಮೇಲುಗೈ ಸಾಧಿಸಿದ್ದಾರೆ.

ಸಂಜೆ 6ಕ್ಕೆ ಶಿಕ್ಷಣ ಸಚಿವರಿಂದ ಸುದ್ದಿಗೋಷ್ಠಿ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಫಲಿತಾಂಶದ ಅಂಕಿ-ಅಂಶಗಳು, ಜಿಲ್ಲಾವಾರು ಸಾಧನೆ ಮತ್ತು ಟಾಪರ್‌ಗಳ ವಿವರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ SMS ಮೂಲಕ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಲಿತಾಂಶ ವೀಕ್ಷಿಸುವುದು ಹೇಗೆ?

ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಅಂಕಪಟ್ಟಿಯನ್ನು ಪಡೆಯಬಹುದು:

  1. ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ ‘2nd PUC Exam-1 Result 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ನೋಂದಣಿ ಸಂಖ್ಯೆ (Registration Number) ಅನ್ನು ನಮೂದಿಸಿ.
  4. ನಿಮ್ಮ ವಿಷಯದ ವಿಭಾಗವನ್ನು (Arts/Commerce/Science) ಆಯ್ಕೆ ಮಾಡಿ.
  5. ‘Submit’ ಬಟನ್ ಒತ್ತಿರಿ. ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ. ಭವಿಷ್ಯದ ಬಳಕೆಗಾಗಿ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಈ ಬಾರಿಯ ವಿಶೇಷತೆಗಳು:

  • ಡಿಜಿಲಾಕರ್ (DigiLocker): ಇದೇ ಮೊದಲ ಬಾರಿಗೆ, ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳು ತಮ್ಮ ಅಧಿಕೃತ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಪಡೆಯಬಹುದು. ಇಂದು (ಏಪ್ರಿಲ್ 9) ಮಧ್ಯಾಹ್ನ 3:00 ಗಂಟೆಯಿಂದಲೇ ಈ ಸೌಲಭ್ಯ ಲಭ್ಯವಿದೆ.
  • ನೇರ ಸಂದೇಶ: ವೆಬ್‌ಸೈಟ್ ಲೋಡ್ ಆಗದಿದ್ದಲ್ಲಿ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನ SMS ಅಥವಾ WhatsApp ಮೂಲಕವೂ ಫಲಿತಾಂಶದ ವಿವರಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ.
  • ಕರ್ನಾಟಕ ಒನ್ ಆಪ್: ವೆಬ್‌ಸೈಟ್ ಮಾತ್ರವಲ್ಲದೆ ‘KarnatakaOne’ ಮೊಬೈಲ್ ಆಪ್ ಮೂಲಕವೂ ರಿಸಲ್ಟ್ ಚೆಕ್ ಮಾಡಬಹುದು.

ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್

ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು! ಒಂದು ವೇಳೆ ಫಲಿತಾಂಶದಲ್ಲಿ ಅಲ್ಪ ಹಿನ್ನಡೆಯಾಗಿದ್ದರೂ ಧೃತಿಗೆಡಬೇಡಿ, ಮಂಡಳಿಯು ನಡೆಸುವ ಪರೀಕ್ಷೆ-2 ರಲ್ಲಿ ಸಾಧನೆ ಮಾಡಲು ಇನ್ನೊಂದು ಅವಕಾಶವಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular