ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊಬೈಲ್ ಹಿಡಿದು ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಹಾಗೂ ವಿಡಿಯೋ ಕಾಲ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಕೃತ ಕಾಮಿಯೊಬ್ಬನಿಗೆ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಚಪ್ಪಲಿಯಿಂದ ತಳಿಸಿದ ಹೈ-ಡ್ರಾಮಾ ಬೆಳಕಿಗೆ ಬಂದಿದೆ ಸೋಷಿಯಲ್ ಮೀಡಿಯಾದಲ್ಲಿ ಈ ಧರ್ಮದೇಟಿನ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ.ಪದೇ ಪದೇ ಮೆಸೇಜ್ ಹಾಕಿ ಮಂಚಕ್ಕೆ ಕರೆಯುತ್ತಿದ್ದ ರೋಮಿಯೋನಿಗೆ, ಆಕೆಯ ರುದ್ರಾವತಾರ ಕಂಡು ಜೀವವೇ ಬಾಯಿಗೆ ಬಂದಂತಾಗಿದೆ.
ಏನಿದು ಘಟನೆ? ಮಂಚಕ್ಕೆ ಕರೆದವನಿಗೆ ಮಕಾಡೆ ಮಲಗಿಸಿದ್ದು ಹೀಗೆ:
ಅಶ್ಲೀಲ ಮೆಸೇಜ್ ಕಿರುಕುಳ: ಬೆಂಗಳೂರಿನ ಈ ಅಸಾಮಿ ಹಲವು ಮಹಿಳೆಯರಿಗೆ ಸತತವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಾ, ಹಾಸಿಗೆ ಹಂಚಿಕೊಳ್ಳುವಂತೆ (ಲೈಂಗಿಕ ಕಿರುಕುಳ) ಪೀಡಿಸುತ್ತಿದ್ದ ಎನ್ನಲಾಗಿದೆ.
ಆತನ ವಿಕೃತ ಮೆಸೇಜ್‌ಗಳಿಂದ ಬೇಸತ್ತ ಮಹಿಳೆಯೊಬ್ಬರು ಸುಮ್ಮನೆ ಕೂರದೆ, ಆತನಿಗೆ ತಕ್ಕ ಪಾಠ ಕಲಿಸಲು ಪ್ಲಾನ್ ಮಾಡಿದ್ದಾರೆ. ತಮ್ಮ ಸಂಗಡಿಗರೊಂದಿಗೆ ತೆರಳಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಸಿಕ್ಕಿಬಿದ್ದ ಕಾಮಿಗೆ ರಸ್ತೆಯಲ್ಲೇ ಚಪ್ಪಲಿ ತಗೆದುಕೊಂಡು ಸರಿಯಾಗಿ ಪೂಜೆ ಮಾಡಿದ್ದಾರೆ. “ನಿನ್ ಜೊತೆ ಮಲ್ಕೋಬೇಕಾ ನಾನು? ಎಷ್ಟಿಟ್ಟಿದ್ದೀಯಾ ದುಡ್ಡು? ಪದೇ ಪದೇ ನಂಗೆ ಮೆಸೇಜ್ ಮಾಡ್ತಾವ್ನೆ ಇವನ ವ್ಯಾಟ್ಸಪ್ ಚೆಕ್ ಮಾಡಿ, ಎಷ್ಟು ಹುಡುಗಿಯರಿಗೆ ಹೀಗೆ ಮಾಡಿದ್ದಾನೆ ನೋಡಿ” ಎಂದು ಸಾರ್ವಜನಿಕರ ಎದುರೇ ಬೆವರಿಳಿಸಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
ಮೊಬೈಲ್ ಸಿಕ್ಕ ತಕ್ಷಣ ಮಹಿಳೆಯರಿಗೆ ಕಿರುಕುಳ ನೀಡುವ ಇಂತಹ ವಿಕೃತ ಮನಸ್ಸುಗಳಿಗೆ ಈ ಮಹಿಳೆಯ ಧೈರ್ಯ ಮತ್ತು ಸಮಯಪ್ರಜ್ಞೆ ಒಂದು ಸೂಕ್ತ ಪಾಠವಾಗಿದೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಸಾರ್ವಜನಿಕರು ಮಹಿಳೆಯ ಧೈರ್ಯಕ್ಕೆ ಭೇಷ್ ಎನ್ನುತ್ತಿದ್ದಾರೆ.

