
ವ್ಯಕ್ತಿಯೊಬ್ಬರ ಆಧಾರ್ ಲಿಂಕ್ ಮಾಡಿ ಖದೀಮರು 28 ಸಾವಿರ ಹಣ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಪಿ ನಗರದ ಸರ್ಕಾರಿ ನೌಕರ ರಂಗನಾಥ್ ಎಂಬುವವರು ದಿಣ್ಣೆ ಬ್ರ್ಯಾಂಚ್ ನ ಎಸ್ ಬಿ ಐ ಬ್ಯಾಂಕ್ ನಲ್ಲಿ 1.10 ಲಕ್ಷ ರೂ ಹಣ ಡೆಪಾಸಿಟ್ ಮಾಡಿದ್ದರು. ಖದೀಮರು ಸುಮಾರು 18,500 ರೂ ಹಣವನ್ನು ಆಧಾರ್ ಲಿಂಕ್ ಮಾಡಿ ಎಗರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

