HomeHealthಚರ್ಮದ ಮೇಲಿನ ಕೆಂಪು ಕಲೆಗಳನ್ನು ಹಗುರವಾಗಿ ಪರಿಗಣಿಸದಿರಿ: ಸೋರಿಯಾಸಿಸ್ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕಾದ ಮಾಹಿತಿಯಿದು

ಚರ್ಮದ ಮೇಲಿನ ಕೆಂಪು ಕಲೆಗಳನ್ನು ಹಗುರವಾಗಿ ಪರಿಗಣಿಸದಿರಿ: ಸೋರಿಯಾಸಿಸ್ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕಾದ ಮಾಹಿತಿಯಿದು

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಅತಿಯಾದ ಮಾನಸಿಕ ಒತ್ತಡದಿಂದಾಗಿ ಅನೇಕ ರೀತಿಯ ಚರ್ಮದ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಅವುಗಳಲ್ಲಿ ಸೋರಿಯಾಸಿಸ್ ಕೂಡ ಒಂದಾಗಿದ್ದು, ಇದು ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಯಾಗಿದೆ.

ಸೋರಿಯಾಸಿಸ್ ಎಂಬುದು ಶರೀರದ ರೋಗನಿರೋಧಕ ಶಕ್ತಿಯಲ್ಲಿ ಉಂಟಾಗುವ ಏರುಪೇರಿನಿಂದ ಬರುವ ಒಂದು ಆಟೋಇಮ್ಯೂನ್ ಸಮಸ್ಯೆಯಾಗಿದೆ. ದೇಹದಲ್ಲಿ ಚರ್ಮದ ಜೀವಕೋಶಗಳು ಸಾಮಾನ್ಯಕ್ಕಿಂತ ಅತ್ಯಂತ ವೇಗವಾಗಿ ಬೆಳೆದಾಗ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಉರಿ, ತುರಿಕೆ ಹಾಗೂ ಚರ್ಮದ ಮೇಲೆ ಕೆಂಪು ಬಣ್ಣದ ದಪ್ಪನೆಯ ರಕ್ತಸಿಕ್ತ ಅಥವಾ ಬಿಳಿ ಬಣ್ಣದ ಹೊಟ್ಟಿನಂತಹ ಪದರಗಳು ಏಳುವುದು ಇದರ ಪ್ರಮುಖ ಲಕ್ಷಣಗಳಾಗಿವೆ. ಇವು ಹೆಚ್ಚಾಗಿ ಮೊಣಕೈ, ಮೊಣಕಾಲು, ತಲೆಬುರುಡೆ ಹಾಗೂ ಬೆನ್ನಿನ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಈ ಕಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ. ಧೂಮಪಾನ, ಮದ್ಯಪಾನ, ಅತಿಯಾದ ಮಾನಸಿಕ ಒತ್ತಡ, ವಾತಾವರಣದ ಬದಲಾವಣೆ ಮತ್ತು ಕೆಲವು ರೀತಿಯ ಔಷಧಗಳ ಅಡ್ಡಪರಿಣಾಮಗಳು ಈ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದರೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಈ ಸಮಸ್ಯೆಯನ್ನು ಯಶಸ್ವಿಯಾಗಿ ನಿಯಂತ್ರಣದಲ್ಲಿಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular