HomeLatest NewsBREAKING: ಲಂಚಾವತಾರದ ಆಡಿಯೋ ವೈರಲ್: PSI ಸೌಮ್ಯಾ ಎತ್ತಂಗಡಿ!

BREAKING: ಲಂಚಾವತಾರದ ಆಡಿಯೋ ವೈರಲ್: PSI ಸೌಮ್ಯಾ ಎತ್ತಂಗಡಿ!

ರಾಯಚೂರು: ರಾಯಚೂರು ಜಿಲ್ಲೆಯ ಇಡಪನೂರು ಠಾಣೆ ಮಹಿಳಾ ಪಿಎಸ್ ಐ ಲಂಚಾವತಾರದ ಆಡಿಯೋ ವೈರಲ್ ಬೆನ್ನಲ್ಲೇ ಪಿಎಸ್ ಐ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಇಡಪನೂರು ಠಾಣೆ ಪಿಎಸ್ ಐ ಸೌಮ್ಯಾ ಹಿರೇಮಠ ಅವರನ್ನು ವರ್ಗಾವಣೆ ಮಾಡಿ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ಆದೇಶ ಹೊರಡಿಸಿದ್ದಾರೆ. ಲಂಚದ ಬಗ್ಗೆ ಪಿಎಸ್ ಐ ಸೌಮ್ಯಾ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಎಸ್ ಐ ಹಾಗೂ ಕಾನ್ಸ್ ಟೇಬಲ್ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. 3 ಲಕ್ಷ ರೂಪಾಯಿ ವ್ಯವಹಾರ ಕುರಿತು ಆಡಿಯೀ ವೈರಲ್ ಆಗಿತ್ತು. ಇಡಪನೂರು ಗ್ರಾಮದ ಸರ್ವೆ ನಂಬರ್ 917ಜಮೀನು ವಿವಾದ ವಿಚಾರವಾಗಿ ಅನುಸೂಯ ಹಾಗೂ ಭೀಮನಗೌಡ ಎಂಬುವವರ ನಡುವೆ ಭೂವಿವಾದವಿತ್ತು. ಜಮೀನು ವಿವಾದ ಸಂಬಂಧ ಎರಡೂ ಕಡೆಯವರಿಂದ ದೂರು ದಾಖಲಾಗಿತ್ತು. ಅನಸೂಯಾ ವಿರುದ್ಧದ ಕೆಲ ಸೆಕ್ಷನ್ ಗಳನ್ನು ಕೈಬಿಡಲು ಪಿಎಸ್ ಐ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಆಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ ಐ ಸೌಮ್ಯಾ ಹಿರೇಮಠ ಅವರನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular