HomeKarnatakaವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕಾಲ್ಪನಿಕ ಹೇಳಿಕೆ : ಸಚಿವ ಪ್ರಿಯಾಂಕ್ ಖರ್ಗೆ ಯುಟರ್ನ್

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕಾಲ್ಪನಿಕ ಹೇಳಿಕೆ : ಸಚಿವ ಪ್ರಿಯಾಂಕ್ ಖರ್ಗೆ ಯುಟರ್ನ್

ಗದಗ : ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕಾಲ್ಪನಿಕ ಎಂದು ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಯುಟರ್ನ್‌ ಹೊಡೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು FSL ವರದಿ ನೋಡಿಲ್ಲ. ಗೃಹಸಚಿವರು ನೋಡಿದ್ದಾರೆ. FSL ವರದಿ ಬಂದಿದೆ. ಘೋಷಣೆ ಕೂಗಿರಬಹುದು ಎಂದು ಹೇಳಿದ್ದಾರೆ ಎಂದರು.

ನನ್ನ ಬಳಿಯಿದ್ದ ವಿಡಿಯೋ ನೋಡಿ ಪರೀಕ್ಷೆ ಮಾಡಿಸಿದ್ವಿ, ಆ ವಿಡಿಯೋ ಖಾಸಗಿಯಾಗಿ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ ಬಂದಿತಲ್ಲ ಅಂತ ಈ ಹಿಂದೆ ಹೇಳಿದ್ದೆ. ಬಿಜೆಪಿಗರಂತೆ ಮಂಡ್ಯದಲ್ಲಿ ಕೂಗಿದ್ದನ್ನು ಮುಚ್ಚಿ ಹಾಕಿಲ್ಲ. ಸರ್ಕಾರದ ವರದಿ ಬಗ್ಗೆ ನಾವು ಅಪಸ್ವರ ಎತ್ತಿದ್ದೇವೆ. ಸರ್ಕಾರದ ವರದಿಯೇ ಫೈನಲ್‌, ಆರ್‌ ಎಸ್‌ ಎಸ್‌ ವರದಿ ಒಪ್ಪಲ್ಲ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular