HomeLive Newsಪ್ರೊ ಕಬಡ್ಡಿ; ಇಂದು ಯುಪಿ ಯೋಧಾಸ್ ಹಾಗೂ ಯು ಮುಂಬಾ ಮುಖಾಮುಖಿ

ಪ್ರೊ ಕಬಡ್ಡಿ; ಇಂದು ಯುಪಿ ಯೋಧಾಸ್ ಹಾಗೂ ಯು ಮುಂಬಾ ಮುಖಾಮುಖಿ

ದೆಹಲಿಯಲ್ಲಿ ಕಬ್ಬಡಿ ಪಂದ್ಯಗಳು ನಡೆಯುತ್ತಿದ್ದು, ಬಾಲಿವುಡ್ ನ ಹಲವಾರು ಸೆಲೆಬ್ರಿಟಿಗಳು ನಿನ್ನೆಯ ಪಂದ್ಯವನ್ನು ವೀಕ್ಷಿಸುವ ಮೂಲಕ ಸಂಭ್ರಮಿಸಿದ್ದಾರೆ. ಇಂದು ದೆಹಲಿಯ ತ್ಯಾಗರಾಜ್ ಇಂಡೋರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲೇ  ಯುಪಿ ಯೋಧಾಸ್ ಮತ್ತು ಯು ಮುಂಬ ಮುಖಾಮುಖಿಯಾಗುತ್ತಿವೆ.

ಯು ಮುಂಬ ತಂಡ ಪ್ಲೇ ಆಫ್ ತಲುಪುವುದನ್ನು ನೋಡುತ್ತಿದ್ದರೆ, ಯುಪಿ ಯೋಧಾಸ್ ತಂಡಕ್ಕೆ ಪ್ಲೇ ಆಫ್ ಗೆ ಬರುವ ಅವಕಾಶವಿಲ್ಲದೆ ಇರುವ ಕಾರಣ ತಮ್ಮ ಪ್ರತಿಷ್ಠೆಗೋಸ್ಕರ ಈ ಪಂದ್ಯದಲ್ಲಿ ಜಯಭೇರಿಯಾಗುವ ಉತ್ಸಾಹದಲ್ಲಿದೆ.

ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಅಂಕಪಟ್ಟಿಯ ತಳದಲ್ಲಿರುವ ತೆಲುಗು ಟೈಟನ್ಸ್ ಜೊತೆ ಸೆಣಸಾಡಲಿದೆ. ದಬಾಂಗ್ ಡೆಲ್ಲಿ ತಂಡ ನಿನ್ನೆ ತನ್ನ ಹೋಂ ಗ್ರೌಂಡ್ ನಲ್ಲಿ ಹೀನಾಯ ಸೋಲನುಭವಿಸಿದ್ದು, ಇಂದು ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular