HomeLive Newsಪ್ರೊ ಕಬಡ್ಡಿ; ಇಂದು ಪುಣೇರಿ ಪಲ್ಟನ್ ಹಾಗೂ ತೆಲುಗು ಟೈಟನ್ಸ್ ಮುಖಾಮುಖಿ

ಪ್ರೊ ಕಬಡ್ಡಿ; ಇಂದು ಪುಣೇರಿ ಪಲ್ಟನ್ ಹಾಗೂ ತೆಲುಗು ಟೈಟನ್ಸ್ ಮುಖಾಮುಖಿ

ಪಾಟ್ನಾದಲ್ಲಿದ್ದ ಕಬಡ್ಡಿ ಪಂದ್ಯಗಳು ನಾಳೆಗೆ ಅಂತ್ಯವಾಗಲಿದ್ದು, ಪಾಟ್ನಾ ಪೈರೇಟ್ಸ್ ತಂಡ ತಮ್ಮ ಹೋಂ ಗ್ರೌಂಡ್ ನಲ್ಲಿ ಸೋಲಿಲ್ಲದ ಸರದಾರರಾಗಿದ್ದಾರೆ.

ಪ್ರತಿ ಪಂದ್ಯದಲ್ಲೂ ಜಯಭೇರಿಯಾಗುವ ಮೂಲಕ ಪಾಟ್ನಾ ಅಭಿಮಾನಿಗಳಲ್ಲಿ ಸಂತಸ ತಂದಿದ್ದಾರೆ. ಇಂದು ಪುಣೇರಿ ಪಲ್ಟನ್ ಮತ್ತು ತೆಲುಗು ಟೈಟನ್ಸ್ ಮುಖಮುಖಿಯಾಗಲಿವೆ.

ಸೆಮಿಫೈನಲ್ ಗೆ ಬರುವ ಅವಕಾಶವನ್ನು ಮತ್ತೊಮ್ಮೆ ಕಳೆದುಕೊಂಡಿರುವ ತೆಲುಗು ಟೈಟನ್ಸ್ ಇಂದಿನ ಪಂದ್ಯದಲ್ಲಿ ಯಾವುದೇ ಆತಂಕವಿಲ್ಲದೆ ಉತ್ಸಾಹದಿಂದ ಕಣಕ್ಕಿಳಿಯಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುಣೇರಿ ಪಲ್ಟನ್ ತಂಡ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಮೊದಲನೇ ಸ್ಥಾನಕ್ಕೆ ಜಿಗಿಯುವ ನಿರೀಕ್ಷೆಯಲ್ಲಿದ್ದಾರೆ.

ಅಂಕಪಟ್ಟಿಯಲ್ಲಿ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಮೊದಲನೇ ಸ್ಥಾನದಲ್ಲಿದ್ದರೆ ಪುಣೇರಿ ಪಲ್ಟನ್ ಎರಡನೇ ಸ್ಥಾನದಲ್ಲಿದೆ. ಕಳೆದ ಸೀಸನ್ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದ ಈ ಎರಡು ತಂಡಗಳು ಈ ಬಾರಿಯೂ ಬಲಿಷ್ಠ ತಂಡಗಳಾಗಿ ಹೊರ ಹೊಮ್ಮಿವೆ.

For Latest News Updates, Join Our Whatsapp Community🚩
RELATED ARTICLES

Most Popular