HomeLive Newsಪ್ರೊ ಕಬಡ್ಡಿ; ಇಂದು ಪುಣೇರಿ ಪಲ್ಟಾನ್ ಹಾಗೂ ಯು ಮುಂಬಾ ಹಣಾಹಣಿ

ಪ್ರೊ ಕಬಡ್ಡಿ; ಇಂದು ಪುಣೇರಿ ಪಲ್ಟಾನ್ ಹಾಗೂ ಯು ಮುಂಬಾ ಹಣಾಹಣಿ

ಇಂದು ಪ್ರೊ ಕಬಡ್ಡಿಯ 86ನೇ ಪಂದ್ಯದಲ್ಲಿ ಸಿಂಹದಮರಿ ಸೈನ್ಯ ಪುಣೆರಿ ಪಲ್ಟಾನ್ ಮತ್ತು ಯು ಮುಂಬಾ ಮುಖಾಮುಖಿಯಾಗುತ್ತಿವೆ. ಪುಣೇರಿ ಪಲ್ಟಾನ್ ತಂಡದಲ್ಲಿ ರೈಡರ್ಗಳು ಸಹ ಟಾಕಲ್ಸ್ ನಲ್ಲಿ ಭಾಗಿಯಾಗುವ ಮೂಲಕ ಆಲ್ ರೌಂಡರ್ಗಳಾಗಿದ್ದಾರೆ. ಈ ಬಲಿಷ್ಠ ತಂಡ ಇದುವರೆಗೂ ಕೇವಲ ಎರಡೇ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಮೊಹಮ್ಮದ್ರೇಜಾ ಚಿಯಾನೆ ಸೇರ್ಪಡೆಯಾದಗಿನಿಂದ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಈ ಬಾರಿ ಪ್ರೊ ಕಬಡ್ಡಿ ಆರಂಭದಲ್ಲಿ ಒಂದರ ಮೇಲೊಂದು ಜಯ ಸಾಧಿಸಿದ್ದ ಯು ಮುಂಬಾ ತಂಡ ಇತ್ತೀಚಿಗೆ ತಮ್ಮ ಕಳಪೆ ಪ್ರದರ್ಶನದಿಂದ ಒಂಬತ್ತನೇ ಸ್ಥಾನಕ್ಕೆ ಇಳಿದಿದೆ. ಆದರೂ ಯು ಮುಂಬಾ ತಂಡ ಪ್ರತಿ ಬಾರಿಯೂ ಪುಣೆರಿ ಪಲ್ಟಾನ್ ಜೊತೆ ಭರ್ಜರಿ ಹೋರಾಟ ಕೊಡುವುದನ್ನು ನಾವು ನೋಡಿದ್ದೇವೆ. ಒಟ್ಟಾರೆ ಕಬಡ್ಡಿ ಅಭಿಮಾನಿಗಳಿಗೆ ಇಂದು ಒಳ್ಳೆಯ ಮನರಂಜನೆ ಸಿಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular