HomeEntertainment'ಮಾ ಬೆಹನ್' ಚಿತ್ರಕ್ಕೆ ಗ್ಲೋಬಲ್ ಸ್ಟಾರ್ ಫಿದಾ: ಮಾಧುರಿ ದೀಕ್ಷಿತ್ ನಟನೆಯ ಸಿನಿಮಾವನ್ನು ಕೊಂಡಾಡಿದ ಪ್ರಿಯಾಂಕಾ...

‘ಮಾ ಬೆಹನ್’ ಚಿತ್ರಕ್ಕೆ ಗ್ಲೋಬಲ್ ಸ್ಟಾರ್ ಫಿದಾ: ಮಾಧುರಿ ದೀಕ್ಷಿತ್ ನಟನೆಯ ಸಿನಿಮಾವನ್ನು ಕೊಂಡಾಡಿದ ಪ್ರಿಯಾಂಕಾ ಚೋಪ್ರಾ

ಖ್ಯಾತ ಬಾಲಿವುಡ್ ಹಾಗೂ ಗ್ಲೋಬಲ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಿನಿರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಒಟಿಟಿ ಬಿಡುಗಡೆ ‘ಮಾ ಬೆಹನ್’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ಈ ಕಾಮಿಡಿ ಡ್ರಾಮಾ ಸಿನಿಮಾ ಈಗಾಗಲೇ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭರ್ಜರಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಈಗ ಪ್ರಿಯಾಂಕಾ ಕೂಡ ಚಿತ್ರತಂಡದ ಬೆನ್ನಲುಬಾಗಿ ನಿಂತಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ಸಿನಿಮಾ ಮೂಡಿಬಂದಿರುವ ರೀತಿಗೆ ಫಿದಾ ಆಗಿದ್ದಾರೆ. “ಇದು ಅತ್ಯಂತ ಜಾಣ್ಮೆಯ ಸಿನಿಮಾ. ಅಷ್ಟೇ ಚೂಪಾದ ಸಂಭಾಷಣೆ, ಹಾಸ್ಯ ಮತ್ತು ಅದ್ಭುತ ಮೇಕಿಂಗ್ ಇಲ್ಲಿದೆ. ನನ್ನ ರಾಣಿ ಮಾಧುರಿ ದೀಕ್ಷಿತ್ ಯಾವಾಗಲೂ ಸ್ಕ್ರೀನ್ ಕದಿಯುವ ಅದ್ಭುತ ನಟಿ. ಇನ್ನು ತೃಪ್ತಿ ದಿಮ್ರಿ ಅವರದ್ದು ಅಪ್ರತಿಮ ನಟನೆ. ಧರ್ಣಾ ದುರ್ಗಾ ಅವರ ದೊಡ್ಡ ಅಭಿಮಾನಿ ನಾನು, ಮುಂದೆ ಅವರು ಸೃಷ್ಟಿಸಲಿರುವ ಮ್ಯಾಜಿಕ್ ನೋಡಲು ಕಾಯುತ್ತಿದ್ದೇನೆ. ನಿರ್ದೇಶಕ ಸುರೇಶ್ ತ್ರಿವೇಣಿ ಅವರ ಸಿನೆಮ್ಯಾಟಿಕ್ ದೃಷ್ಟಿಕೋನ ಅದ್ಭುತವಾಗಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ.

ಏನಿದೆ ಚಿತ್ರದ ಕಥೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುರೇಶ್ ತ್ರಿವೇಣಿ ನಿರ್ದೇಶನದ ಈ ಸಿನಿಮಾ ಒಂದೇ ಕುಟುಂಬದ ಮೂವರು ಮಹಿಳೆಯರ ಸುತ್ತ ಸುತ್ತುತ್ತದೆ. ಬಾಲಿವುಡ್ ಹಿರಿಯ ನಟಿ ಮಾಧುರಿ ದೀಕ್ಷಿತ್ ಇಲ್ಲಿ ವಿಧವೆಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಸ್ಟಾರ್ ನಟಿ ತೃಪ್ತಿ ದಿಮ್ರಿ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಧರ್ಣಾ ದುರ್ಗಾ ಅವರ ಹೆಣ್ಣುಮಕ್ಕಳಾಗಿ ನಟಿಸಿದ್ದಾರೆ. ತೃಪ್ತಿ ವಿವಾಹಿತ ಮಹಿಳೆಯಾಗಿ ಹಾಗೂ ಧರ್ಣಾ ದುರ್ಗಾ ಕಂಟೆಂಟ್ ಕ್ರಿಯೇಟರ್ ಆಗಬೇಕೆಂದು ಒಂಟಿಯಾಗಿ ಜೀವಿಸುವ ಹುಡುಗಿಯಾಗಿ ಬಣ್ಣ ಹಚ್ಚಿದ್ದಾರೆ.

ಒಂದು ರಾತ್ರಿ ತಾಯಿ ತನ್ನಿಬ್ಬರು ಹೆಣ್ಣುಮಕ್ಕಳನ್ನು ತುರ್ತಾಗಿ ಮನೆಗೆ ಕರೆಯಿಸಿಕೊಂಡಾಗ ಕಥೆಗೆ ದೊಡ್ಡ ಟ್ವಿಸ್ಟ್ ಸಿಗುತ್ತದೆ. ಅವರ ಮನೆಯೊಳಗೆ ನೆರೆಮನೆಯ ಗುಪ್ತಾ ಜಿ (ರವಿ ಕಿಶನ್ ಅಭಿನಯದ ಪಾತ್ರ) ಮೃತಪಟ್ಟಿರುತ್ತಾನೆ. ಅಲ್ಲಿಂದ ಮುಂದೆ ಸಾಗುವ ಘಟನೆಗಳು ಹಾಸ್ಯದ ಜೊತೆಗೆ ಸಮಾಜಕ್ಕೆ ಯೋಚನೆ ಹಚ್ಚುವಂತಹ ಸಂದೇಶವನ್ನು ನೀಡುತ್ತವೆ. ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಪುರುಷ ಪ್ರಧಾನ ವ್ಯವಸ್ಥೆಯ ವಿವಿಧ ಮಖಗಳನ್ನು ಈ ಸಿನಿಮಾ ಅತ್ಯಂತ ಮನೋರಂಜನಾತ್ಮಕವಾಗಿ ತೆರೆದಿಡುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular