HomeKarnatakaರಾಮ ಮಂದಿರ ದೇಣಿಗೆ ಹಗರಣ: ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ಯತ್ನ:...

ರಾಮ ಮಂದಿರ ದೇಣಿಗೆ ಹಗರಣ: ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ಯತ್ನ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಹಗರಣವನ್ನು ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಮ ಮಂದಿರ ದೇಣಿಗೆ ಹಗರಣದಲ್ಲಿ ಕರ್ನಾಟಕದ ನಂಟಿದೆ ಎಂಬ ಅಖಿಲೇಶ್ ಯಾದವ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಖಿಲೇಶ್ ಯಾದವ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದ್ರೆ ಬಿಜೆಪಿಗೆ ಆ.ಎಸ್.ಎಸ್ ಗೆ ನೇಷನ್ ಫಸ್ಟ್ ಅಲ್ಲ. ಬಿಜೆಪಿ-ಅರ್.ಎಸ್.ಎಸ್ ಗೆ ಡೊನೇಷನ್ ಫಸ್ಟ್ ಎಂದು ಕಿಡಿಕಾರಿದ್ದಾರೆ.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಯಾರು? ಉದ್ಘಾಟನೆ ಮಾಡಿದ್ದು ಯಾರು? ಸಮಿತಿ ಮಾಡಿದ್ದು ಯಾರು? ಎಲ್ಲಾ ಮಾಡಿದ್ದು ಪ್ರಧಾನಿ ಮೋದಿ ಅವರು. ಈಗ ದೇಣಿಗೆ ಹಗರಣ ಆಗಿದೆ. ಚಿನ್ನ, ಬೆಳ್ಳಿ, ಹಣ ಏನು ಇಲ್ಲ. ಈಗ ಪ್ರಧಾನಿ ಮೋದಿ ಮೌನವಾಗಿ ಇದ್ದಾರೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೋಗಿ ಆದಿತ್ಯನಾಥ್ ಭಾಷಣ ಮಾಡ್ತಾರೆ. ಈಗ ಲೂಟಿ ಹೊಡೆದಿದ್ದು ನೀವು. ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲ ಅಂತ ಏನು ಗ್ಯಾರಂಟಿ ಇದೆ? ಎಸ್ ಐಟಿ ರಚನೆ ಮಾಡಿ ಯಾರಿಗೆ ರಿಪೋರ್ಟ್ ಕೊಟ್ಟರು? ಐಎಎಸ್ ಆಫೀಸರ್‌ಗೆ ರಿಪೋರ್ಟ್ ಕೊಟ್ಟರು. ಆ ಅಧಿಕಾರಿ ಕೂಡ ಟ್ರಸ್ಟ್‌ನಲ್ಲಿ ಇರೋನು. ಪ್ರಧಾನಿ ಮೋದಿ ನಾನು ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ ಅಂದ್ರು. ಈಗ ಏನ್ ಆಯ್ತು? ಬಿಜೆಪಿ ಅವರು ಈ ಹಗರಣವನ್ನು ಮುಚ್ಚಿ ಹಾಕೋಕೆ ಮುಂದಾಗಿದ್ದಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular