HomeKarnatakaಕೆಪಿಎಸ್ ಸಿ AEE ನೇಮಕಾತಿ ಹಗರಣದಲ್ಲಿ ನಾನು ಭಾಗಿಯಾಗಿದ್ದರೆ ರಾಜಕೀಯವಾಗಿಯೇ ನಿವೃತ್ತಿ ಪಡೆಯುತ್ತೇನೆ; ಬಿಜೆಪಿ, ಜೆಡಿಎಸ್...

ಕೆಪಿಎಸ್ ಸಿ AEE ನೇಮಕಾತಿ ಹಗರಣದಲ್ಲಿ ನಾನು ಭಾಗಿಯಾಗಿದ್ದರೆ ರಾಜಕೀಯವಾಗಿಯೇ ನಿವೃತ್ತಿ ಪಡೆಯುತ್ತೇನೆ; ಬಿಜೆಪಿ, ಜೆಡಿಎಸ್ ನಾಯಕರು ನಿವೃತ್ತಿ ಪಡೆಯುತ್ತಾರಾ? ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ಕೆಪಿಎಸ್ ಸಿಯಲ್ಲಿ ಹಗರಣ ನಡೆದಿದೆ ಎಂಬುದು ಜಗಜ್ಜಾಹೀರಾಗಿದೆ. ಆದರೆ 24 ಎಇಇಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಲ್ಲದೇ, ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಕೆಪಿಎಸ್ ಸಿ ಅಕ್ರಮಕ್ಕೂ ನನಗೂ ಏನು ಸಂಬಂಧ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪ್ರೊಯಾಂಕ್ ಖರ್ಗೆ, ಕೆಪಿಎಸ್ ಸಿ ಹಗರಣಕ್ಕೂ, ನಮ್ಮ ಸರಕ್ಕೂ, ಅಕ್ರಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇಂಜಿನಿಯರ್ ಗಳ ನೇಮಕತಾಯಿಯಲ್ಲಿ ಅಕ್ರಮವಾಗಿರುವ ಬಗ್ಗೆ ದಾಖಲೆ ಇದ್ದರೆ ದೂರು ನೀಡಿ ನಾನೇ ತನಿಖೆ ಮಾಡಿಸುತ್ತೇನೆ. ಅದನ್ನು ಬಿಟ್ಟು ಈ ರೀತಿ ಅಪಪ್ರಚಾರ ಮಾಡುಬುದು ಸರಿಯಲ್ಲ ಎಂದು ಕಿಡಿಕಾರಿದರು.

24 ಎಇಇಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಯಾವ ರೀತಿ ಅಕ್ರಮ ನಡೆದಿದೆ ಎಂದು ಹೇಳಿಲ್ಲ. ಹಗರಣದಲ್ಲಿ ಬಿಜೆಪಿ, ಜೆಡಿಎಸ್ ನವರೇ ಭಾಗಿಯಾಗಿರುತ್ತಾರೆ. ಪ್ರಶ್ನೆ ಮಾಡೊದರೆ ನಾನು ಭಾಗಿಯಾಗಿಲ್ಲ ಎಂದು ಸುದ್ದಿಗೋಷ್ಠಿ ಮಾಡಿ ಹೇಳಿಕೆ ಕೊಡುತ್ತಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಜಿನಿಯರ್ ಗಳ ನೇಮಕಾತಿಯಲ್ಲಿ ನನ್ನ ಪಾತ್ರ ಸಾಬೀತಾದರೆ ನಾನು ರಾಜಕೀಯವಾಗಿ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಬಿಜೆಪಿ, ಜೆಡಿಎಸ್ ಮುಖಂಡರ ಪಾತ್ರವಿದ್ದರೆ ಅವರು ರಾಜೀನಾಮೆ ನೀಡುತ್ತಾರೆಯೇ? ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರು ಸುಮ್ಮನೇ ಆರೋಪ ಮಾಡಿ ಹಿಟ್ ಆಂಡ್ ರನ್ ಮಾಡುವುದಲ್ಲ. ದಾಖಲೆ ಇದ್ದರೆ ದೂರು ನೀಡಲಿ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular