HomeLatest NewsBIG NEWS: ಬಿಜೆಪಿಯವರ ಇಂಧನ ಉಳಿತಾಯ, ಮೆಟ್ರೋ ಪ್ರಯಾಣ ಒಂದು ದಿನದ ನಾಟಕ: ಸಚಿವ ಪ್ರಿಯಾಂಕ್...

BIG NEWS: ಬಿಜೆಪಿಯವರ ಇಂಧನ ಉಳಿತಾಯ, ಮೆಟ್ರೋ ಪ್ರಯಾಣ ಒಂದು ದಿನದ ನಾಟಕ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ ಬಿಜೆಪಿ ಕೇಂದ್ರ ಸಚಿವರು, ನಾಯಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ, ಬೈಕ್ ನಲ್ಲಿ ಓಡಾಡುತ್ತಿದ್ದು, ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಬಿಜೆಪಿಯವರ ಇಂಧನ ಉಳಿತಾಯ ಒಂದು ದಿನದ ನಾಟಕ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರ ಮೆಟ್ರೋ ಪ್ರಯಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದೆಲ್ಲ ಬರೀ ನಾಟಕ. ದಿನ ಮೆಟ್ರೋ ಹತ್ತಿದ್ರೆ ನಾವೂ ಒಪ್ತೀವಿ. ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಇದೆಲ್ಲ ಒಂದು ದಿನದ ನಾಟಕ ಬಿಜೆಪಿಯವರದ್ದು. ಪ್ರತಿದಿನ ಬಿಎಂಟಿಸಿ ಬಸ್ ಹತ್ತಲಿ. ಅವರು ನಮ್ಮ ಶಕ್ತಿ ಯೋಜನೆ ಪ್ರಯೋಜನ ಪಡೆದುಕೊಳ್ಳಲಿ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯೇಂದ್ರ ಮೆಟ್ರೋ ಹತ್ತುವಂತೆ ಮಾಡಿದ್ಯಾರು? ವಿಜಯೇಂದ್ರ ಮೆಟ್ರೋ ಹತ್ತುವ ಪರಿಸ್ಥಿತಿ ಯಾಕೆ ಬಂತು? ಹಾಗೆ ಮಾಡಿದವರು ಯಾರು? ಇದಕ್ಕೆ ಉತ್ತರ ಬೇಕಲ್ವಾ ಎಂದು ಟಾಂಗ್ ನೀಡಿದರು.

ಎಸ್‌ಐಆರ್ ವಿಚಾರವಾಗಿ, ಎಸ್‌ಐಆರ್ ಅನ್ನೋದು ಬಿಜೆಪಿ ಗೆಲ್ಲಿಸಲೆಂದೇ ಮಾಡಿರೋ ಡಿಸೈನ್. ಇದೊಂದು ಸಂಪೂರ್ಣ ಅಸಂವಿಧಾನಾತ್ಮಕ. ಎಸ್‌ಐಆರ್ ಬೇಡ ಅಂತಿಲ್ಲ, ಸರಿಯಾಗಿ ಮಾಡಿ ಅಂತಿದ್ದೇವೆ. ಉದಾಹರಣೆಗೆ ನನ್ನ ಹೆಸರು ಪ್ರಿಯಾಂಕ್. ಈ ಹೆಸರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವೋಟ್ ಡಿಲೀಟ್ ಆಗಲಿದೆ. ಮಹಾರಾಷ್ಟ್ರದಲ್ಲಿ ವೈಸ್ ಅಡ್ಮಿರಲ್ ಅವರ ವೋಟ್ ಡಿಲೀಟ್ ಆಗಿದೆ. ಬಹುತೇಕ ಜನರನ್ನು ಮತದಿಂದ ದೂರ ಇಟ್ಟಂತೆ ಆಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರದ ಆರ್ಥಿಕ ನೀತಿಯಿಂದ ಏನಾಗಿದೆ? ಕಾಂಗ್ರೆಸ್‌ನವರು ಬಂದರೆ ಮಂಗಳಸೂತ್ರ ಕಸಿದುಕೊಳ್ತಾರೆ ಅಂತಾ ಮೋದಿ ಅವರು ಭಾಷಣ ಮಾಡಿದ್ರು. ಈಗ ಅವರು ಮಾಡ್ತಿರೋದೇನು? ಚಿನ್ನ ಖರೀದಿ ಮಾಡಬೇಡಿ ಅಂತಿದಾರೆ. ಆರ್ಥಿಕ ನೀತಿ ಚೆನ್ನಾಗಿದೆ ಅನ್ನೋದಾದರೆ ಮೊದಲು ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಸೇಲ್ಸ್ ಟ್ಯಾಕ್ಸ್ ಕಡಿಮೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಮೋದಿ ಅವರು ಮಾಡುವ ಎಲ್ಲಾ ಅವಾಂತರಗಳಿಗೆ ನಾವೇ ಹೊರೆ ಹೊರಬೇಕಾ? ಇಂಡಿಯಾ-ಚೈನಾ, ಕೊರೊನಾ ಅವಧಿ, ಪಾಕಿಸ್ತಾನದ ವಿರುದ್ಧ ಯುದ್ಧ ಹೀಗೆ ಎಲ್ಲಾ ಸಮಯದಲ್ಲೂ ನಾವೇ ಹೊರೆ ಹೊರಬೇಕಾ? ಅವರೇನು ಕತ್ತೆ ಕಾಯ್ತಿದಾರಾ? ಇವರೇನು ಮಾಡ್ತಿದಾರೆ ಎಂದು ಕಟುವಾಗಿ ಪ್ರಶ್ನಿಸಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಇದರಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ನವರು ಇದ್ದಾರೆ. ಅವರಿಗೇ ಇದರ ಪಾಲು ಹೋಗ್ತಿದೆ. ಯಾಕೆ ಇನ್ನೂ ರಾಜೀನಾಮೆ ಕೊಡ್ತಿಲ್ಲ? ಹಗಲಿರುಳು ಓದಿದ ಮಕ್ಕಳ ಭವಿಷ್ಯ ಏನಾಗಬೇಕು? ಮೊದಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡಬೇಕು. ಜೆನ್ ಝಿ ಅಂತಾ ಮೋದಿ ಹೇಳ್ತಾರೆ, ಪರೀಕ್ಷಾ ಪೇ ಚರ್ಚೆ ಮಾಡ್ತಾರೆ. ನೀಟ್ ಬಗ್ಗೆ ಚರ್ಚೆ ಯಾವಾಗ ಮಾಡ್ತಾರೆ ಮೋದಿ? ಈಗ ಎಲ್ಲೋದರು ದತ್ತಾತ್ರೇಯ ಹೊಸಬಾಳೆ ಅವರು? ಆರ್‌ಎಸ್‌ಎಸ್‌ನವರು? ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular