
1990 – 91ರ ಸಾಲಿನ ರಣಜಿ ಪಂದ್ಯದಲ್ಲಿ ಸಂಜಯ್ ಮಂಜ್ರೇಕರ್ 377 ರನ್ ಗಳಿಸಿದ್ದು, ರಣಜಿ ಪಂದ್ಯದಲ್ಲಿ ವೈಯಕ್ತಿಕವಾಗಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬುದು ಈವರೆಗಿನ ದಾಖಲೆಯಾಗಿತ್ತು. ಇದೀಗ ಪೃಥ್ವಿ ಶಾ ಈ ದಾಖಲೆಯನ್ನು ಮುರಿದಿದ್ದಾರೆ.
ಪೃಥ್ವಿ ಶಾ ಇತ್ತೀಚೆಗೆ ಗಮನಾರ್ಹ ಸಾಧನೆ ಮಾಡದ ಕಾರಣ ಅವರು ಟೀಮ್ ಇಂಡಿಯಾ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ತಮ್ಮ ಈ ದಾಖಲೆಯ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ.

