HomeInternationalಪ್ರಿನ್ಸೆಸ್ ಡಯಾನಾ ಅವರ ಐತಿಹಾಸಿಕ 'ರಿವೇಂಜ್ ಡ್ರೆಸ್' ಹರಾಜು: ಕಪ್ಪು ಉಡುಪಿನ ರೋಚಕ ಕಥೆ ಇಲ್ಲಿದೆ

ಪ್ರಿನ್ಸೆಸ್ ಡಯಾನಾ ಅವರ ಐತಿಹಾಸಿಕ ‘ರಿವೇಂಜ್ ಡ್ರೆಸ್’ ಹರಾಜು: ಕಪ್ಪು ಉಡುಪಿನ ರೋಚಕ ಕಥೆ ಇಲ್ಲಿದೆ

ಬ್ರಿಟನ್ ರಾಜಕುಮಾರಿ ಡಯಾನಾ ಧರಿಸಿದ್ದ ಜಗತ್ಪ್ರಸಿದ್ಧ ‘ರಿವೇಂಜ್ ಡ್ರೆಸ್’ ಅಂದರೆ ಸೇಡಿನ ಉಡುಪು ಮತ್ತೆ ಸುದ್ದಿಯಲ್ಲಿದೆ. ರಾಜಮನೆತನದ ವಿವಾದದ ನಡುವೆ ಫ್ಯಾಷನ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ಈ ಕಪ್ಪು ಬಣ್ಣದ ರೇಷ್ಮೆ ಉಡುಪು ಇದೀಗ ನ್ಯೂಯಾರ್ಕ್‌ನ ಸಾಥ್‌ಬೀಸ್ ಹರಾಜು ಸಂಸ್ಥೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಮೂರು ಲಕ್ಷ ಡಾಲರ್‌ಗೂ ಹೆಚ್ಚು ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿರುವ ಈ ಉಡುಪನ್ನು ಹರಾಜಿಗೂ ಮುನ್ನ ಹಾಂಗ್ ಕಾಂಗ್ ಮತ್ತು ಜಿನೀವಾಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

೧೯೯೪ರ ಜೂನ್ ೨೯ ರಂದು ಪ್ರಿನ್ಸ್ ಚಾರ್ಲ್ಸ್ ತಮಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿತ್ತು ಎಂಬುದನ್ನು ದೂರದರ್ಶನದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ರಾಜಮನೆತನದ ಈ ವಿವಾದ ಇಡೀ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಅದೇ ದಿನ ಸಂಜೆ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಡಯಾನಾ, ಕ್ರಿಸ್ಟಿನಾ ಸ್ಟ್ಯಾಂಬೋಲಿಯನ್ ವಿನ್ಯಾಸಗೊಳಿಸಿದ್ದ ಭುಜ ತೆರೆದ ಸಣ್ಣ ಕಪ್ಪು ಉಡುಪನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದರು. ರಾಜಮನೆತನದ ನಿಯಮಗಳಿಗೆ ವಿರುದ್ಧವಾಗಿ ಕಪ್ಪು ಉಡುಪು ಮತ್ತು ಕೆಂಪು ನೈಲ್ ಪಾಲಿಶ್ ಧರಿಸಿ ಬಂದ ಡಯಾನಾ ಅವರ ಈ ಲುಕ್, ಮಾಧ್ಯಮಗಳಲ್ಲಿ ‘ರಿವೇಂಜ್ ಡ್ರೆಸ್’ ಎಂದೇ ಪ್ರಸಿದ್ಧಿಯಾಯಿತು.

ಪತಿಯ ತಪ್ಪೊಪ್ಪಿಗೆಯ ನಂತರ ದುಃಖಿತರಾಗುವ ಬದಲು, ಅತ್ಯಂತ ಆತ್ಮವಿಶ್ವಾಸದಿಂದ ಮತ್ತು ಸುಂದರವಾಗಿ ಕ್ಯಾಮೆರಾ ಕಣ್ಣುಗಳಿಗೆ ಕಾಣಿಸಿಕೊಂಡ ಡಯಾನಾ ಅವರ ಈ ನಿರ್ಧಾರ ರಾಜಕುಮಾರಿಯ ಬಿಂಬವನ್ನೇ ಬದಲಾಯಿಸಿತು. ಯಾವುದೇ ಮಾತುಗಳನ್ನಾಡದೇ ತಮ್ಮ ಉಡುಪಿನ ಮೂಲಕವೇ ಅವರು ಜಗತ್ತಿಗೆ ಪ್ರತ್ಯುತ್ತರ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

೧೯೯೭ ರಲ್ಲಿ ಡಯಾನಾ ಅವರು ಕ್ಯಾನ್ಸರ್ ಮತ್ತು ಏಡ್ಸ್ ಪೀಡಿತರ ನೆರವಿಗಾಗಿ ನಡೆಸಿದ ಹರಾಜಿನಲ್ಲಿ ಈ ಉಡುಪು ಮೊದಲ ಬಾರಿಗೆ ಮಾರಾಟವಾಗಿತ್ತು. ಇದೀಗ ಸುಮಾರು ಮೂರು ದಶಕಗಳ ನಂತರ ಮತ್ತೆ ಹರಾಜಿಗೆ ಬರುತ್ತಿದ್ದು, ಇದರಿಂದ ಬರುವ ಹಣದ ಒಂದು ಭಾಗವನ್ನು ಆರೋಗ್ಯ ಸಂಸ್ಥೆಯ ಚಾರಿಟಿಗೆ ನೀಡಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular