HomeKarnatakaBREAKING : ‘ಇಸ್ರೋ’ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ |P. M Modi

BREAKING : ‘ಇಸ್ರೋ’ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ |P. M Modi

ಬೆಂಗಳೂರು : ಬೆಂಗಳೂರಿನ ಹೆಚ್ ಎ ಎಲ್ ಏರ್ ಪೋರ್ಟ್ ಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಗ್ರೀಸ್ ದೇಶದಿಂದ ಪ್ರಧಾನಿ ಮೋದಿ ಇದೀಗ ಬೆಂಗಳೂರಿನ ಹೆಚ್ ಎ ಎಲ್ ಏರ್ ಪೋರ್ಟ್ ಗೆ ಆಗಮಿಸಿದ್ದು, ಕೆಲಹೊತ್ತು ಏರ್ ಪೋರ್ಟ್ ನಲ್ಲಿ ವಿಶ್ರಾಂತಿ ಪಡೆದು ನಂತರ ಇಸ್ರೋ ಕೇಂದ್ರಕ್ಕೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಸ್ವಾಗತಕ್ಕೆ ಬಿಜೆಪಿ ಸಿದ್ದವಾಗಿದೆ.

ಚಂದ್ರಯಾನ- 3 ಯಶಸ್ಸಿನ ಹಿನ್ನೆಲೆ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದು, ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಆಗಮಿಸಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ.

ಪ್ರಧಾನಿ ವೇಳಾಪಟ್ಟಿ
ಬೆಳಗ್ಗೆ 5.55ಕ್ಕೆ ಎಚ್ಎಎಲ್ ಏರ್ಪೋರ್ಟ್ ಗೆ ಮೋದಿ ಆಗಮನ
• ಬೆಳಗ್ಗೆ 6.30 ರವರೆಗೆ ಏರ್ಪೋರ್ಟ್ ನಲ್ಲಿ ಮೋದಿಗೆ ಸ್ವಾಗತ
• ಬೆಳಗ್ಗೆ 7 ಗಂಟೆಗೆ ಇಸ್ರೊ ಕೇಂದ್ರಕ್ಕೆ ಭೇಟಿ
• ಬೆಳಗ್ಗೆ 8 ಗಂಟೆವರೆಗೆ ಇಸ್ರೊ ಕೇಂದ್ರದಲ್ಲಿ ಸಭೆ
• ಬೆಳಗ್ಗೆ 8.35ಕ್ಕೆ ಬೆಂಗಳೂರಿನಿಂದ ನವದೆಹಲಿಗೆ ವಾಪಸ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತ ಚಂದ್ರಯಾನ – 3 ರ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಭಾರತ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಸುರಿಮಳೆಯೇ ಹರಿದು ಬಂದಿದೆ. ಭಾರತದ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ಇಡೀ ವಿಶ್ವವೇ ಈಗ ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ. ಈ ಹಿನ್ನೆಲೆ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಬಂದಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular