ಬೆಂಗಳೂರು : ಬೆಲೆ ಏರಿಕೆ ಹೀಗೆ ಮುಂದುವರೆದರೆ ರಾಜ್ಯ ಸರ್ಕಾರದ ವಿರುದ್ಧ ಕನ್ನಡಿಗರು ದಂಗೆ ಏಳುವುದು ನಿಶ್ಚಿತ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಇಂಧನ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ರಾಜ್ಯದ ಜನರ ನೆಮ್ಮದಿಗೆ ಕೊಳ್ಳಿಯಿಟ್ಟಿರುವ ಸಿಎಂ ಸಿದ್ದರಾಮಮಯ್ಯನವರು ಹೊಸ ಸಂಶೋಧನೆಗೆ ಇಳಿದಿದ್ದಾರೆ.! 25 ಸಾವಿರ ಎಕರೆ ಸಾರ್ವಜನಿಕ ಆಸ್ತಿ ಅಡವಿಡಲು ಆಳ ಅಧ್ಯಯನ ನಡೆಸಿದ ಕಾಂಗ್ರೆಸ್ ಸರ್ಕಾರವೀಗ, ಬಸ್ ಪ್ರಯಾಣ ದರ ಸೇರಿ ಬೆಲೆ ಏರಿಕೆಗೆ ಇನ್ನೇನಾದರೂ ಉಳಿದಿದೆಯಾ? ಅಂತ ದುರ್ಬಿನ್ ಹಾಕಿಕೊಂಡು ಶೋಧನೆಯಲ್ಲಿ ತೊಡಗಿದೆ! ಕಾಂಗ್ರೆಸ್ ಅಂದ್ರೆ ಜನರ ಜೇಬಿಗೆ ಕತ್ತರಿ ಖಚಿತ, ಕರುನಾಡು ದಿವಾಳಿ ಖಂಡಿತ ಹಾಗೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಿಗರು ದಂಗೆ ಏಳುವುದು ನಿಶ್ಚಿತ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಇಂಧನ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ರಾಜ್ಯದ ಜನರ ನೆಮ್ಮದಿಗೆ ಕೊಳ್ಳಿಯಿಟ್ಟಿರುವ ಸಿಎಂ @siddaramaiah ನವರು ಹೊಸ ಸಂಶೋಧನೆಗೆ ಇಳಿದಿದ್ದಾರೆ.!
25 ಸಾವಿರ ಎಕರೆ ಸಾರ್ವಜನಿಕ ಆಸ್ತಿ ಅಡವಿಡಲು ಆಳ ಅಧ್ಯಯನ ನಡೆಸಿದ @INCKarnataka ಸರ್ಕಾರವೀಗ, ಬಸ್ ಪ್ರಯಾಣ ದರ ಸೇರಿ ಬೆಲೆ ಏರಿಕೆಗೆ ಇನ್ನೇನಾದರೂ ಉಳಿದಿದೆಯಾ? ಅಂತ ದುರ್ಬಿನ್… pic.twitter.com/ayE1NCxYwK
— BJP Karnataka (@BJP4Karnataka) June 29, 2024

