HomeKarnatakaಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್; ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಲೈಂಗಿಕ ಹಗರಣ; ಸಚಿವ ಕೃಷ್ಣೇಬೈರೇಗೌಡ...

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್; ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಲೈಂಗಿಕ ಹಗರಣ; ಸಚಿವ ಕೃಷ್ಣೇಬೈರೇಗೌಡ ಕಿಡಿ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ಲೈಂಗಿಕ ಹಗರಣ ಎಂದು ಸಚಿವ ಕೃಷ್ಣೇಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಈಗ ದಾರಿ ತಪ್ಪಿದ್ದು ಯಾರು ಕುಮಾರಸ್ವಾಮಿಯವರೇ? ನಿಮ್ಮ ಮನೆ ಮಗನೇ ದಾರಿ ತಪ್ಪಿದ್ದಾನೆ. ಇದಕ್ಕೆ ಏನೆಂದು ಹೇಳುತ್ತೀರಿ? ಎಂದು ಕಿಡಿಕಾರಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶದ ಇತಿಹಾಸದಲ್ಲಿಯೇ ದೊಡ್ಡ ಲೈಂಗಿಕ ಹಗರಣವಾಗಿದೆ. 100ಕ್ಕೂ ಹೆಚ್ಚು ಮಹಿಳೆಯರ ಮೇಲಿನ ಅತ್ಯಾಚಾರ ಖಂಡನೀಯ. ಮಾಜಿ ಪ್ರಧಾನಿಯೊಬ್ಬರ ಮೊಮ್ಮಗ ಈ ರೀತಿ ಮಾಡಿರುವುದು ದೊಡ್ಡ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಗ ಇಷ್ಟೆಲ್ಲ ಮಾಡಿದರೂ ಹೆಚ್.ಡಿ.ರೇವಣ್ಣಗೆ ಗೊತ್ತೇ ಇಲ್ವಾ? ಅಥವಾ ಗೊತ್ತಿದ್ರೂ ಇಂತಹ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರಾ? ರೇವಣ್ಣ ಅವರೇ, ಭವಾನಿ ರೇವಣ್ಣ ಅವರೇ ನಿಮ್ಮ ಮಗ ಇಂತದ್ದೆಲ್ಲ ಮಾಡುತ್ತಿದ್ದರೂ ನಿಮಗೆ ಗೊತ್ತಿದ್ದೂ ಸುಮ್ಮನಿದ್ದಿರೇ? ಹಾಸನ ಜಿಲ್ಲೆಯಲ್ಲಿ ನೂರಾರು ಮಹಿಳೆಯರ ಮಾನಭಂಗ ಮಾಡಲಾಗಿದೆ. ಸಂಸದನಾಗಿ ಇಂತಹ ಕೃತ್ಯವೆಸಗಿರುವುದು ದೇಶವೇ ತಲೆತಗ್ಗಿಸುವ ಕೆಲಸ. ಸಂಸದ ಪ್ರಜ್ವಲ್ ಪೋಷಕರು ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ದೇವೇಗೌಡರ ಕುಟುಂಬದವರಿಗೆ ಅಧಿಕಾರ ಇದ್ದರೆ ಸಾಕು. ಹೆಚ್.ಡಿ,ರೇವಣ್ಣಗೆ PWD ಬೇಕು. ಅದಿಕಾರದ ದಾಹ. ಚಿಕ್ಕಪ್ಪ, ಮಗ, ಅತ್ತೆ, ಸೊಸೆ ಎಲ್ಲರಿಗೂ ಅಧಿಕಾರ ಬೇಕು. ಸಿಬಿಐ ಸುಮೋಟೋ ಕೇಸ್ ದಾಖಲಿಸಬೇಕಿತ್ತು. ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular