HomeKarnatakaBIG NEWS: ಕೋವಿಡ್ ಹಗರಣ; ಬಿಜೆಪಿ ವಿರೋಧಿ ನಿವೃತ್ತ ನ್ಯಾಯಮೂರ್ತಿ ಆಯೋಗದಿಂದ ತನಿಖೆಗೆ ಆದೇಶ; ದಿನಬೆಳಗಾದರೆ...

BIG NEWS: ಕೋವಿಡ್ ಹಗರಣ; ಬಿಜೆಪಿ ವಿರೋಧಿ ನಿವೃತ್ತ ನ್ಯಾಯಮೂರ್ತಿ ಆಯೋಗದಿಂದ ತನಿಖೆಗೆ ಆದೇಶ; ದಿನಬೆಳಗಾದರೆ ನಮ್ಮನ್ನು ಬೈಯ್ಯುವುದೇ ಅವರ ಕೆಲಸ; ಪ್ರಹ್ಲಾದ್ ಜೋಶಿ ಕಿಡಿ

 

ಹುಬ್ಬಳ್ಳಿ: ಕೋವಿಡ್ ಔಷಧಿ, ಉಪಕರಣಗಳ ಖರೀದಿಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ತನಿಖಾ ಆಯೋಗ ರಚಿಸಿ ರಾಜ್ಯ ಸರ್ಕರ ಆದೇಶ ಹೊರಡಿಸಿದೆ. ಇದೀಗ ತನಿಖಾ ಆಯೋಗ ಮುಖ್ಯಸ್ಥರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ತನಿಖಾ ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿಗಳಾಗಿದ್ದಾರೆ. ಅವರು ಬಿಜೆಪಿ ವಿರೋಧಿ. ದಿನಬೆಳಗಾದರೆ ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ಬೈಯ್ಯುವುದೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ವಿರೋಧಿ ನಿವೃತ್ತ ನ್ಯಾಯಾಧೀಶರನ್ನು ಇಟ್ಟು ಬಿಜೆಪಿಗೆ ಬೈಯಿಸುವ ಕೆಲಸ ಮಾಡುತ್ತಿದ್ದಾರೆ. ಜನ ಇದನ್ನು ನೋಡುತ್ತಿದ್ದಾರೆ ಎಂದು ಗುಡುಗಿದರು.

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ರಕ್ತಬೀಜಾಸುರ. ಇಡೀ ದೇಶದಲ್ಲಿ ನೆಹರು ಕಾಲದಿಂದ ಹಿಡಿದು ಭ್ರಷ್ಟಾಚಾರ ಮಾಡಿದಂತವರು ಕಾಂಗ್ರೆಸ್ ನವರು ಎಂದು ವಾಗ್ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular