ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ಪ್ರಸ್ತುತ ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಸವಾಲು-ಪ್ರತಿಸವಾಲಿನ ರಾಜಕಾರಣ ಶುರುವಾಗಿದೆ. ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಅದಾಗಲೇ ಅಖಾಡಕ್ಕಿಳಿದು ವಾಕ್ಪ್ರಹಾರ ಪ್ರಾರಂಭಿಸಿದ್ದಾರೆ. ಬಿಜೆಪಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ನಡುವೆಯೇ ಸಂಘರ್ಷ ಆರಂಭವಾಗಿದ್ದು, ಸ್ವಪಕ್ಷದ ನಾಯಕರೇ ಒಬ್ಬರಿಗೊಬ್ಬರು ಸವಾಲು ಹಾಕಿ ಕಾದಾಟಕ್ಕಿಳಿದ್ದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಕೈ ಶಾಅಸಕ ಪ್ರದೀಪ್ ಈಶ್ವರ್ ಹಾಗೂ ಜೆಡಿಎಸ್ ನ ರವಿ ಕುಮಾರ್ ನಡುವೆ ವಾಗ್ದಾಳಿ ಆರಂಭವಾಗಿದ್ದು, ನೇರಾ ನೇರ ಸವಾಲು ಹಾಕಿಕೊಂಡು ಮುಂಬರುವ ಚುನಾವಣೆಗೆ ಈಗಿನಿಂದಲೇ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿಗೆ ವೇದಿಕೆ ಸಿದ್ಧ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಿನ್ನೆ ಜೆಡಿಎಸ್ ಶಾಸಕ ರವಿ ಕುಮಾರ್, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನೀನು ಗೆದ್ದರೆ ನಾನು ನಿನ್ನ ಮನೆ ವಾಚ್ ಮೆನ್ ಆಗಿ ಸೆಲ್ಯೂಟ್ ಹೊಡೆಯುತ್ತೇನೆ. ಒಂದು ವೇಳೆ ನೀನು ಸೋತರೆ ಹೆಚ್.ಡಿ.ಕುಮಾರಸ್ವಾಮಿ ಮನೆ ವಾಚ್ ಮೆನ್ ಆಗುವೆಯಾ? ತಾಕತ್ತಿದ್ದರೆ ಮುಂದಿನ ಚುನಾವನೆಯಲ್ಲಿ ಚಿಕ್ಕಬಳ್ಳಾಪುರದಂದಲೇ ಗೆದ್ದು ತೋರಿಸು ಎಂದು ಸವಾಲೆಸೆದಿದ್ದರು.
ಅಲ್ಲದೇ ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಂಪೆಗೌಡ ಜಯಾಂತಿ ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಹೈಡ್ರಾಮ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವರ್ ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್.ಡಿ,ಕುಮಾರಸ್ವಾಮಿ ವಿರುದ್ಧವೇ ನೇರ ವಾಗ್ದಾಳಿ ನಡೆಸಿದ್ದಾರೆ.
ತಾಕತ್ತಿದ್ದರೆ ಹೆಚ್.ಡಿ. ಕುಮಾರಸ್ವಾಮಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ನಿನ್ನ ಚೇಲಾಗಳಿಂದ ನನಗೆ ಸವಾಲು ಹಾಕಿಸುವುದಲ್ಲ, ನೀನೇ ಬಾ ನೀನಾ, ನಾನಾ ನೋಡೇಬಿಡೋಣ ಎಂದು ಏಕವಚನದಲ್ಲಿ ಕಿಡಿ ಕಾರಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಯಾರನ್ನೂ ಸಹಿಸುವುದಿಲ್ಲ. ಡಿ.ಕೆ.ಶಿವಕುಮಾರ್ ಸಿಎಂ ಆಗಿದ್ದಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಹಿಸಲಾಗುತ್ತಿಲ್ಲ. ಇಲ್ಲಿ ಒಬಿಸಿ ವ್ಯಕ್ತಿಯಾದ ನಾನು ಶಾಸಕನಾಗಿರುವುದನ್ನು ಸಹಿಸಲಾಗುತ್ತಿಲ್ಲ. ನಾವು ಯಾವಾಗಲೂ ನಿಮ್ಮ ಮನೆಯಲ್ಲಿ ಕೂಲಿ ಮಾಡಬೇಕು. ನೀವು ಹಾಕುವ ಅನ್ನ ತಿಂದು ಇರಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಮುದಾಯದ ಜಯಂತಿಯಲ್ಲಿ ನಮ್ಮನ್ನು ಅವಮಾನಿಸಿದ್ದೀರಿ. ನಮ್ಮ ಸಮುದಾಯದ ಜಯಂತಿಯಲ್ಲಿ ನಿಮ್ಮನ್ನು ಅವಮಾನಿಸಿದ್ದೇವಾ? ತಾಳ್ಮೆ ಕಳೆದುಕೊಂಡಿಲ್ಲ. ನಾನು ಒಕ್ಕಲಿಗ ಡಿ.ಕೆ.ಶಿವಕುಮಾರ್ ಪರ ನಿಂತಿದ್ದೇನೆ ಎಂದು ಗುಡುಗಿದ್ದಾರೆ.

