HomeKarnatakaPower Cut : ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ’

Power Cut : ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ’

ಬೆಂಗಳೂರು : ಬೆಂಗಳೂರು ನಗರದಲ್ಲಿ ಮೂರನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ  ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ನವೆಂಬರ್ 10 ರ ಇಂದು, ನವೆಂಬರ್ 11 ರ ನಾಳೆ  ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನವೆಂಬರ್ 10 ರ ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

66/11 ಕೆವಿ ಗ್ಲೋಬಲ್ ಟೆಕ್ ಪಾರ್ಕ್ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಆರ್ ಎಂಝಡ್ ಇಕೋ ವರ್ಲ್ಡ್ ಕ್ಯಾಂಪಸ್, ಮ್ಯಾರಿಯೆಟ್ ಹೋಟೆಲ್, ದೇವರಬೀಸನಹಳ್ಳಿ ಗ್ರಾಮ, ವಜ್ರಂ ಅಪಾರ್ಟ್ ಮೆಂಟ್, ದೊಡ್ಡಕ್ಕನಹಳ್ಳಿ ರಸ್ತೆ, ಸ್ಟರ್ಲಿಂಗ್ ಅಸ್ಕೆಂಟಿಯಾ ಅರ್ಪಾಟ್ ಮೆಂಟ್, ಹಾಗೂ ಜೆ.ವಿ. ಹೋಟೆಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನವೆಂಬರ್ 11 ರಂದು ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ ಆರು ಗಂಟೆಗಳ ಕಾಲ ವಿದ್ಯುತ್ ಕಡಿತ

ಬಿಳನಕೋಟೆ,  ಹೊಸಹಳ್ಳಿ, ಹನುಮಂತಪುರ, ಕುಲ್ಲುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ ಮುಂತಾದ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ಕಡಿತವಾಗಲಿದೆ. ಕುಲವನಹಳ್ಳಿ ಗ್ರಾಮ ಪಂಚಾಯತ್, ಹರೇಬೊಮ್ಮನಹಳ್ಳಿ ಗ್ರಾಮ ಪಂಚಾಯತ್, ಮತ್ತು ಗುಂಡೇನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular