ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಕಾರಿನ ಮೇಲೆ ಬರೋಬ್ಬರಿ 3,400 ಲಿಪ್‌ಸ್ಟಿಕ್ ಮುತ್ತಿನ ಗುರುತುಗಳನ್ನು ಹಾಕಿ ಅಲಂಕರಿಸಿದ್ದಾಳೆ. ಈ ವಿಶಿಷ್ಟ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೋಂದಣಿ ಸಂಖ್ಯೆಯ ಆಧಾರದ ಮೇಲೆ ಕಾರನ್ನು ಪತ್ತೆಹಚ್ಚಿದ ಪೊಲೀಸರು ₹5,500 ದಂಡ ವಿಧಿಸಿ, ಲಿಪ್‌ಸ್ಟಿಕ್ ಗುರುತುಗಳನ್ನು ತೊಳೆಸಿದ್ದಾರೆ.
ವ್ಯಕ್ತಿಯೊಬ್ಬರ ಕಾರಿಗೆ ಪ್ರೇಯಸಿ ಬರೋಬ್ಬರಿ 3,400 ಲಿಪ್‌ಸ್ಟಿಕ್ ಮುತ್ತಿನ ಗುರುತುಗಳನ್ನು ಹಾಕಿ ಅಲಂಕರಿಸಿದ್ದು, ಈ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಈ ವಿಶಿಷ್ಟ ಅಲಂಕಾರವೇ ಕೊನೆಗೆ ಕಾರಿನ ಮಾಲೀಕರಿಗೆ ₹5,500 ದಂಡ ಕಟ್ಟುವಂತೆ ಮಾಡಿದೆ. ಕಾರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಂಚಾರ ಪೊಲೀಸರ ಗಮನಕ್ಕೆ ಬಂದಿದೆ. ಸಾಮಾಜಿಕ ಜಾಲತಾಣದ ಟ್ರೆಂಡ್‌ವೊಂದರಿಂದ ಪ್ರೇರಿತವಾಗಿ ಕಾರನ್ನು ಅಲಂಕರಿಸಲಾಗಿತ್ತು. ಆದರೆ ಕೊನೆಗೆ ಕಾರಿನ ಮಾಲೀಕರಿಗೆ ₹5,500 ದಂಡ ವಿಧಿಸಲಾಯಿತು.
ಆದಿತ್ಯ ಸಿಕರ್ವಾರ್ ಎಂಬುವವರ ಕಾರಿನ ಸಂಪೂರ್ಣ ಹೊರಭಾಗದಲ್ಲಿ ಲಿಪ್‌ಸ್ಟಿಕ್‌ನಿಂದ ಮುತ್ತಿನ ಗುರುತುಗಳನ್ನು ಹಾಕಲಾಗಿತ್ತು. ಈ ವಿಶಿಷ್ಟ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.
ವಿದೇಶಿ ಸಾಮಾಜಿಕ ಜಾಲತಾಣ ಟ್ರೆಂಡ್‌ನಿಂದ ಪ್ರೇರಣೆ ಪಡೆದ ಆದಿತ್ಯ ಅವರ ಗೆಳತಿ ಈ ಪ್ರಯೋಗವನ್ನು ಕಾರಿನ ಮೇಲೆ ಮಾಡಲು ನಿರ್ಧರಿಸಿದ್ದರು. ಸುಮಾರು 3,400 ಲಿಪ್‌ಸ್ಟಿಕ್ ಗುರುತುಗಳನ್ನು ಒಂದೊಂದಾಗಿ ಹಾಕಲು ಸುಮಾರು ನಾಲ್ಕು ಗಂಟೆಗಳು ಬೇಕಾಯಿತು. ಮುತ್ತಿನ ಗುರುತುಗಳಿಂದ ತುಂಬಿದ್ದ ಕಾರು ರಸ್ತೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿತ್ತು. ಫೋಟೋಗಳು ವೈರಲ್ ಆದ ನಂತರ, ಚಿತ್ರಗಳಲ್ಲಿ ಕಾಣುತ್ತಿದ್ದ ಕಾರಿನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ವಾಹನವನ್ನು ಪತ್ತೆಹಚ್ಚಿದರು.
ನಂತರ ಕಾರಿನ ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ₹5,500 ದಂಡದ ಚಲನ್ ನೀಡಿದರು. ತನ್ನ ತಪ್ಪನ್ನು ಆದಿತ್ಯ ಸಿಕರ್ವಾರ್ ಒಪ್ಪಿಕೊಂಡರು. ಬಳಿಕ ಕಾರಿನ ಮೇಲಿದ್ದ ಎಲ್ಲಾ ಲಿಪ್‌ಸ್ಟಿಕ್ ಮುತ್ತಿನ ಗುರುತುಗಳನ್ನು ತೆಗೆದುಹಾಕಲಾಯಿತು ಮತ್ತು ಕಾರನ್ನು ತೊಳೆದು ಅದರ ಮೂಲ ಸ್ಥಿತಿಗೆ ತರಲಾಯಿತು.

