HomeLatest Newsನಮ್ಮ ಮನೆಗೆ ಹಾವು ಬರೋಕೆ ಮೀಟರ್ ಬೇಕು, ಏಕೆಂದರೆ ನಮ್ಮ ಬಳಿ 'ಪೂಚ್ಚ ಸರ್' ಇದ್ದಾರೆ;...

ನಮ್ಮ ಮನೆಗೆ ಹಾವು ಬರೋಕೆ ಮೀಟರ್ ಬೇಕು, ಏಕೆಂದರೆ ನಮ್ಮ ಬಳಿ ‘ಪೂಚ್ಚ ಸರ್’ ಇದ್ದಾರೆ; ಕೇರಳದಲ್ಲಿ ‘ಕ್ಯಾಟ್ ಬಾಸ್’ನದ್ದೇ ಹವಾ

ಬೇಸಿಗೆ ಬಂತೆಂದರೆ ಸಾಕು ಎಲ್ಲೆಲ್ಲೂ ಹಾವುಗಳ ಕುರಿತ ಎಚ್ಚರಿಕೆಯ ಸಂದೇಶಗಳು ಹರಿದಾಡುತ್ತಿರುತ್ತವೆ. ಅದೇ ರೀತಿ ಈ ಬಾರಿಯ ಬೇಸಿಗೆಯಲ್ಲೂ ಎಲ್ಲೆಡೆ ಹಾವುಗಳ ಕುರಿತು ಎಚ್ಚರವಾಗಿರಿ, ಚಪ್ಪಲಿ ಸ್ಟಾಂಡ್‌ನಲ್ಲಿ ಇರುವ ಚಪ್ಪಲಿ ಅಥವಾ ಶೂಗಳನ್ನು ನೋಡಿ ಧರಿಸಿ ಎಂದೆಲ್ಲ ಸಲಹೆಗಳು ಕೇಳಿಬಂದವು.

ಇನ್ನು ಕೇರಳದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವ ಕಾರಣ ಹಾವುಗಳ ಹಾವಳಿ ತುಸು ಹೆಚ್ಚೇ ಎನ್ನಬಹುದು. ಮೇ ತಿಂಗಳಿನಲ್ಲೇ ಕೇರಳದಲ್ಲಿ ಹಾವು ಕಡಿತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಕೊಲ್ಲಂ ಜಿಲ್ಲೆಯಲ್ಲಿ ಓರ್ವ ಹಾಗೂ ವಯನಾಡಿನಲ್ಲಿ ಓರ್ವ ವ್ಯಕ್ತಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.

ಇನ್ನು ಕಳೆದ ತಿಂಗಳೂ ಸಹ ಹಾವು ಕಡಿತದಿಂದ ಕೇರಳದಲ್ಲಿ ಅಸ್ವಸ್ಥರಾದ ಹಲವು ಸುದ್ದಿಗಳು ಹರಿದಾಡಿದ್ದವು. ಹೀಗೆ ಸಾವು ನೋವು ಸಂಭವಿಸಿದ ಬೆನ್ನಲ್ಲೇ ಹಾವುಗಳು ಮನೆಗಳಿಗೆ ನುಗ್ಗಿದ ವರದಿಗಳೂ ಸಹ ಬಂದವು. ಹೀಗೆ ಹಾವುಗಳ ಉಪಟಳ ಹೆಚ್ಚಳವಾಗುತ್ತಿದ್ದಂತೆ ಕೇರಳದಲ್ಲಿ ಬೆಕ್ಕುಗಳ ರೀಲ್ ಸಿಕ್ಕಾಪಟ್ಟೆ ವೈರಲ್ ಆಗಲು ಆರಂಭಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಹಲವಾರು ಮಂದಿ ಈ ಬಗ್ಗೆ ವಿಡಿಯೊ ಮಾಡಿದ್ದು, ನಿಮ್ಮ ಮನೆಗೆ ಹಾವು ಬರುವುದಿಲ್ಲವೇ ಎಂದು ಜನ ಕೇಳುತ್ತಾರೆ, ಆದರೆ ನಮ್ಮ ಮನೆಯಲ್ಲಿ ವಿಶೇಷ ವ್ಯಕ್ತಿ ಇದ್ದಾರೆ ಹಾಗಾಗಿ ಹಾವು ಬರುವುದಿಲ್ಲ ಎಂದು ಬೆಕ್ಕಿನ ವಿಡಿಯೊಗಳನ್ನು ಸ್ಟೈಲಿಷ್ ಹಾಗೂ ಬಿಲ್ಡಪ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗಳನ್ನು ಸೇರಿಸಿ ಹಂಚಿಕೊಂಡಿದ್ದಾರೆ.

ಇನ್ನು ಕೆಲ ವಿಡಿಯೊಗಳಲ್ಲಿ ಮನೆಗೆ ಬಂದ ಹಾವುಗಳನ್ನು ಬೆಕ್ಕುಗಳು ಬೇಟೆಯಾಡುವುದನ್ನೂ ಸಹ ಹಂಚಿಕೊಂಡಿದ್ದಾರೆ. ಈ ಮೂಲಕ ಪೂಚ್ಚ ಸರ್ ( ಬೆಕ್ಕು ಸರ್ ) ಮನೆಯಲ್ಲಿ ಇರುವವರೆಗೂ ಯಾವ ಹಾವೂ ಮನೆಗೆ ಬರುವುದಿಲ್ಲ ಎಂಬ ಸಂದೇಶವನ್ನು ಜನತೆ ಸಾರಿದ್ದಾರೆ. ಏನಿಲ್ಲವೆಂದರೂ ನೂರಕ್ಕೂ ಅಧಿಕ ವಿಡಿಯೊ ಇದೇ ವಿಷಯದ ಮೇಲೆ ಕೇರಳದಿಂದ ಅಪ್‌ಲೋಡ್ ಆಗಿದ್ದು, ಸದ್ಯ ಕೇರಳದಲ್ಲಿ ಕ್ಯಾಟ್‌ ಬಾಸ್‌ ಹಾವಳಿ ಜೋರಾಗಿದೆ.

video: https://www.instagram.com/reel/DXzEX3Wze38/?igsh=dXhzODI4YjA3Z2V4

ಸೂಚನೆ: ಇನ್ನು ಪಶು ವೈದ್ಯರ ಪ್ರಕಾರ ಎಲ್ಲ ಹಾವುಗಳನ್ನೂ ಬೆಕ್ಕಿಗೆ ಬೇಟೆಯಾಡಿ ಪಾರುಪತ್ಯ ಮೆರೆಯಲು ಸಾಧ್ಯವಿಲ್ಲ. ದೊಡ್ಡ ಬೆಕ್ಕುಗಳು ಸಣ್ಣ ಹಾಗೂ ಹೆಚ್ಚು ವಿಷಕಾರಿಯಲ್ಲದ ಹಾವುಗಳನ್ನು ಹೊಡೆದುರುಳಿಸುತ್ತವೆ. ಕೆಲವೊಮ್ಮೆ ಸಣ್ಣ ಬೆಕ್ಕುಗಳೂ ಸಹ ಆ ಕೆಲಸ ಮಾಡಬಹುದು. ಆದರೆ ವಿಷಕಾರಿ ಹಾವುಗಳು ಒಮ್ಮೆ ಬೆಕ್ಕಿಗೆ ಕಚ್ಚಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಬೆಕ್ಕುಗಳು ತಮಗಿರುವ ಅತಿ ವೇಗದ ಪ್ರತಿಕ್ರಿಯೆ ಶಕ್ತಿ ಬಳಸಿ ಹಾವುಗಳಿಗಿಂತ ಬೇಗನೆ ಕೆಲಸ ಮಾಡುತ್ತವೆ. ಹಾಗೆಂದ ಮಾತ್ರಕ್ಕೆ ಪ್ರತಿ ಬಾರಿ ಅದೇ ಫಲಿತಾಂಶ ಬರುತ್ತದೆ ಎಂದು ಭಾವಿಸಬೇಡಿ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular