HomeLatest Newsಅಜ್ಜಿ ಭೇಟಿಗೆ ಬಂದಿದ್ದ ಅತ್ಯಾಚಾರ ಆರೋಪಿ ಪೊಲೀಸರ ಬಲೆಗೆ..!

ಅಜ್ಜಿ ಭೇಟಿಗೆ ಬಂದಿದ್ದ ಅತ್ಯಾಚಾರ ಆರೋಪಿ ಪೊಲೀಸರ ಬಲೆಗೆ..!

ಹೈದರಾಬಾದ್‌: 2023ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಸೈಬರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಅಸ್ವಸ್ಥ ಅಜ್ಜಿಯನ್ನು ನೋಡಲು ಸೆಕೆಂದರಾಬಾದ್‌ನ ಆಸ್ಪತ್ರೆಗೆ ಬಂದಿದ್ದ ವೇಳೆ ಆರೋಪಿ ರಾಬಿನ್ಸನ್‌ ಕಾರ್ನೆಲ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಾಲಾನಗರ ವಲಯ ಪೊಲೀಸರು ಸುದೀರ್ಘ ತನಿಖೆ, ನಿರಂತರ ಕಣ್ಗಾವಲು ಹಾಗೂ ಅಪಾರ ತಾಳ್ಮೆಯಿಂದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೇ 21ರಂದು ಈ ಬಂಧನ ನಡೆದಿದೆ.

2023ರ ಮೇ ತಿಂಗಳಲ್ಲಿ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ರಾಬಿನ್ಸನ್‌ ಕಾರ್ನೆಲ್‌ ವಿರುದ್ಧ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012’ (ಪೋಕ್ಸೋ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ದೂರಿನಲ್ಲಿ, ಮೇ 23ರಂದು ತನ್ನ ಮಗಳು 30,000 ರೂ. ನಗದು ಸಮೇತ ಕಾಣೆಯಾಗಿದ್ದಳು ಎಂದು ತಂದೆ ತಿಳಿಸಿದ್ದರು. ಒಂದು ವಾರದ ನಂತರ ಬಾಲಕಿ ಮನೆಗೆ ಹಿಂದಿರುಗಿದಾಗ, ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಳು. ಇದರ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣವನ್ನೂ ದಾಖಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ಪ್ರಕಾರ, 23 ವರ್ಷದ ಆರೋಪಿ ರಾಬಿನ್ಸನ್‌ ಅಲಿಯಾಸ್ ಲಕ್ಕಿ, ಬಾಲನಗರ ನಿವಾಸಿಯಾಗಿದ್ದು, 2023ರ ಬೇಸಿಗೆ ರಜೆಯಲ್ಲಿ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಆಕೆಗೆ ವಾತ್ಸಲ್ಯದ ಮಾತುಗಳನ್ನಾಡಿ ವಿಶ್ವಾಸ ಗಳಿಸಿ, ಮನೆಯಿಂದ ಹಣ ತೆಗೆದುಕೊಂಡು ರಜಾದಿನಗಳನ್ನು ಆನಂದಿಸಲು ಬರುವಂತೆ ಅವಳನ್ನು ಒಪ್ಪಿಸಿದ್ದನು.

ಮೇ 23, 2023ರಂದು ರಾಬಿನ್ಸನ್‌ ಬಾಲಕಿಯನ್ನು ರೈಲಿನಲ್ಲಿ ವಿಶಾಖಪಟ್ಟಣಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಪರಿಚಯಸ್ಥನ ಮನೆಯಲ್ಲಿ ಎರಡು ದಿನಗಳ ಕಾಲ ಕೂಡಿಹಾಕಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಬಾಲಕಿ ಸಹಾಯಕ್ಕಾಗಿ ಅಳಲು ಪ್ರಾರಂಭಿಸಿದಾಗ ರಾಬಿನ್ಸನ್‌ ಗಾಬರಿಗೊಂಡು, ಅವಳನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದ. ಮೇ 29, 2023ರಂದು ಇಬ್ಬರೂ ರೈಲಿನಲ್ಲಿ ಸೆಕೆಂದರಾಬಾದ್‌ಗೆ ಮರಳಿದ್ದರು. ರೈಲು ನಿಲ್ದಾಣದಲ್ಲಿ ನೀರು ತರಲು ಹೋಗುತ್ತೇನೆ ಎಂದು ಹೇಳಿ ರಾಬಿನ್ಸನ್‌ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದನು. ಸಂತ್ರಸ್ತೆ ನಂತರ ತನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಒಂದು ವರ್ಷದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular