ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಮನೆ ಮಾಡಿದೆ. ಬೆಂಗಳೂರಿಗರು ರಾತ್ರಿ ಮೋಜು ಮಸ್ತಿ ಮಾಡಿ 2026 ರನ್ನು ಸ್ವಾಗತಿಸಿದರು.
ಇಯರ್ ಎಂಡ್ ಅಂದರೆ ಪ್ರತಿವರ್ಷ ಕುಡಿದು ಟೈಟಾಗುವುದು ಕಾಮನ್. ಯುವತಿಯರು, ಯುವಕರು ನಡು ರಸ್ತೆಯಲ್ಲಿ ಮದ್ಯದ ನಶೆಯಲ್ಲಿ ತೇಲಾಡಿದರು. ಕುಡಿದ ಟೈಟಾದ ಯುವತಿಯರನ್ನು ಆಟೋದಲ್ಲಿ ಕೂರಿಸಿ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಯುವಕರು ಮಾತ್ರವಲ್ಲದೇ ಯುವತಿಯರು ಕೂಡ ಟೈಟಾಗಿ ತೂರಾಡಿದರು.
ಹೊಸ ವರ್ಷದ ಪಾರ್ಟಿ ಮುಗಿದ ನಂತರ ಮನೆಗೆ ಹೋಗಲು ಕಷ್ಟಪಡುತ್ತಿದ್ದ ಮಹಿಳೆಯರನ್ನು ಆಟೋ ಮೂಲಕ ಮನೆಗೆ ಕಳುಹಿಸಿಕೊಟ್ಟರು.
ಹೊಸ ವರ್ಷಾಚರಣೆ ಯುವಕರ ನಡುವೆ ಮಾರಾಮಾರಿ ನಡೆದ ಘಟನೆ ಕೂಡ ಬೆಂಗಳೂರಿನಲ್ಲಿ ನಡೆದಿದೆ. ಇದರ ನಡುವೆ ಕುಡಿದು ಟೈಟಾದ ಯುವಕನೋರ್ವ ಎಲ್ಲಾ ಪೊಲೀಸರಿಗೆ ಸೆಲ್ಯೂಟ್ ಮಾಡುತ್ತಿರುವ ದೃಶ್ಯ ಕಂಡು ಬಂತು.ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಾಚರಣೆ ಜೋರಾಗಿತ್ತು.

