HomeKarnatakaರಾಜ್ಯಾದ್ಯಂತ ಜೈಲು ವಾರ್ಡನ್ ಹುದ್ದೆಗಳಿಗೆ ನೇಮಕಾತಿ: ಮಾಜಿ ಸೈನಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ರಾಜ್ಯಾದ್ಯಂತ ಜೈಲು ವಾರ್ಡನ್ ಹುದ್ದೆಗಳಿಗೆ ನೇಮಕಾತಿ: ಮಾಜಿ ಸೈನಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು ಪೊಲೀಸ್‌ ಇಲಾಖೆಯಿಂದ ಆಸಕ್ತ ಮಾಜಿ ಸೈನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ.

ಆಸಕ್ತ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದ ಮಾಜಿ ಸೈನಿಕರು  ತಮ್ಮ ಇಚ್ಚೆಯನ್ನು ದಿನಾಂಕ 25-11-2024 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಯ ದೂರವಾಣಿ ಸಂಖ್ಯೆ 08182-220925 ಗೆ ಕರೆ ಮಾಡಿ ತಿಳಿಸಲು ಕೋರಲಾಗಿದೆ.

ಶಿವಮೊಗ್ಗ – 30, ದಾವಣಗೆರೆ – 5 ಮತ್ತು ಚಿತ್ರದುರ್ಗ – 4 ಹುದ್ದೆಗಳು ಖಾಲಿ ಇದ್ದು, ಒಂದು ವರ್ಷದ ಗುತ್ತಿಗೆ ಅವಧಿಯು ಅವಶ್ಯಕತೆಗೆ ಅನುಗುಣವಾಗಿ ಮುಂದುವರೆಸುವ ಅವಕಾಶವೂ ಸಹ ಇರುತ್ತದೆ ಎಂಬುದನ್ನು ತಮ್ಮ ಮಾಹಿತಿಗಾಗಿ ನೀಡಿದೆ.  ಕರ್ತವ್ಯದ ಅವಧಿಯು 8 ಗಂಟೆಗಳು ಮೂರು ಶಿಫ್ಟ್‌ ಆಗಿದ್ದು, ವೇತನ 28,499 ರೂ.  ಆಗಿರುತ್ತದೆ. ಆಸಕ್ತರ ಪಟ್ಟಿಯನ್ನು ಈ ಇಲಾಖೆಯ ನಿರ್ದೇಶನಾಲಯಕ್ಕೆ ದಿನಾಂಕ 25-11-2024 ರಂದೇ ನೀಡಬೇಕಾಗಿರುವುದರಿಂದ ಹೆಚ್ಚಿನ ಸಮಯವಕಾಶವಿರುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ರವರ ಆದೇಶದ ಮೇರೆಗೆ ಮೇಲಿನ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular