HomeKarnatakaBIG NEWS: ಪೊಲೀಸ್ ಕಾನ್ಸ್ ಟೇಬಲ್ ನಿಂದಲೇ ದುಷ್ಕೃತ್ಯ: ಪ್ರೇಯಸಿ ಪತಿಯ ಕೊಲೆಗೆ ಯತ್ನ: ಆರೋಪಿ...

BIG NEWS: ಪೊಲೀಸ್ ಕಾನ್ಸ್ ಟೇಬಲ್ ನಿಂದಲೇ ದುಷ್ಕೃತ್ಯ: ಪ್ರೇಯಸಿ ಪತಿಯ ಕೊಲೆಗೆ ಯತ್ನ: ಆರೋಪಿ ಅರೆಸ್ಟ್

ಕೊಡಗು: ಪೊಲೀಸ್ ಕಾನ್ಸ್ ಟೇಬಲ್ ಓರ್ವ ಕೊಲೆ ಯತ್ನ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವರಾಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮದಲ್ಲಿ ನಡೆದಿದೆ.

ಕೊಟ್ರೇಶ್ (30) ಕೊಲೆ ಆರೋಪಿ ಪೊಲೀಸ್ ಪೇದೆ. ಕೊಟ್ರೇಶ್ ಆಯೀಷಾ ಎಂಬ ಮಹಿಳೆಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ. ಅಲ್ಲದೇ ಆಯೀಷಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪವೂ ಕೇಳಿಬಂದಿದೆ. ತಡರಾತ್ರಿ ಆಯೀಷಾ ಮನೆಗೆ ಬಂದ ದುರುಳ, ಆಯೀಷಾ ಪತಿ ಇಫ್ರಾಜ್ ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.

ಇಫ್ರಾಜ್ ಮಲಗಿದ್ದ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ, ಹತ್ಯೆ ಮಾಡಲು ಕೊಟ್ರೇಶ್ ಯತ್ನಿಸಿದ್ದು, ಈ ವೇಳೆ ಆಯಿಷಾ ಅಕ್ಕನ ಮಗ ತಡೆದಿದ್ದಾನೆ. ಆರೋಪಿಯಿಂದ ಬಚಾವಾದ ಇಫ್ರಾಜ್ ಪೊಲೀಸರಿಗೆ ದೂರು ನೀಡಲು ಮುಂದಾದರೂ ಕೊಟ್ರೇಶ್ ವಿರುದ್ಧ ದೂರು ದಾಖಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಇಫ್ರಾಜ್ ಕೊಡಗು ಎಸ್ ಪಿ ರಾಮರಾಜನ್ ಅವರಿಗೆ ದೂರು ನೀಡಿದ್ದಾರೆ. ಎಸ್ ಪಿ ಸೂಚನೆ ಮೇರೆಗೆ ಕೊಟ್ರೇಶ್ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular