HomeIndiaಮಹಿಳಾ ಸಹೋದ್ಯೋಗಿ ಜೊತೆ ಇದ್ದಾಗಲೇ ಪತ್ನಿಗೆ ಸಿಕ್ಕಿಬಿದ್ದ ಪೊಲೀಸ್ ಇನ್ಸ್ ಪೆಕ್ಟರ್; ಹಿಗ್ಗಾಮುಗ್ಗಾ ಥಳಿತ

ಮಹಿಳಾ ಸಹೋದ್ಯೋಗಿ ಜೊತೆ ಇದ್ದಾಗಲೇ ಪತ್ನಿಗೆ ಸಿಕ್ಕಿಬಿದ್ದ ಪೊಲೀಸ್ ಇನ್ಸ್ ಪೆಕ್ಟರ್; ಹಿಗ್ಗಾಮುಗ್ಗಾ ಥಳಿತ

ಆಗ್ರಾ: ಪೊಲೀಸ್ ಇನ್ಸ್ ಪೆಕ್ಟರ್ ಓರ್ವ ಮಹಿಳಾ ಸಿಬ್ಬಂದಿ ಜೊತೆ ಮನೆಯಲ್ಲಿ ಇದ್ದಾಗಲೇ ಪತ್ನಿ ಎಂಟ್ರಿಕೊಟ್ಟಿದ್ದು, ಇಬ್ಬರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

ಮುಜಾಫರ್ ನಗರ ಪೊಲೀಸ್ ಇನ್ಸ್ ಪೆಕ್ಟರ್, ರಾಕಬ್ ಗಂಜ್ ಠಾಣೆಯ ಮಹಿಳಾ ಸಿಬ್ಬಂದಿ ಜೊತೆ ಆಗ್ರಾದ ಮನೆಯಲ್ಲಿ ಇದ್ದರು. ಅನುಮಾನಗೊಂಡ ಇನ್ಸ್ ಪೆಕ್ಟರ್ ಪತ್ನಿ ಸಂಬಂಧಿಕರ ಜೊತೆ ಮನೆಗೆ ತೆರಳಿದ್ದಾಳೆ. ಪತಿ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಬಾಗಿಲು ತೆರೆಯುವಂತೆ ಹೇಳಿದರೆ ಬಾಗಿಲು ತೆರೆದಿಲ್ಲ. ಇದರಿಂದ ಕೋಪಗೊಂಡ ಪತ್ನಿ ಹಾಗೂ ಸಂಬಂಧಿಕರು ಮನೆಯ ಬಾಗಿಲು ಒಡೆದು ಒಳನುಗ್ಗಿದ್ದು, ಪತಿ ಹಾಗೂ ಮಹಿಳಾ ಪೊಲೀಸ್ ಇಬ್ಬರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇಬ್ಬರನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular