HomeLatest NewsBREAKING: ಪಾರ್ಕ್ ನಲ್ಲಿ ಜೊತೆಗಿದ್ದ ಯುವಕ –ಯುವತಿ ಬೆದರಿಸಿ ನೈತಿಕ ಪೊಲೀಸ್ ಗಿರಿ: ಐವರು ಅರೆಸ್ಟ್

BREAKING: ಪಾರ್ಕ್ ನಲ್ಲಿ ಜೊತೆಗಿದ್ದ ಯುವಕ –ಯುವತಿ ಬೆದರಿಸಿ ನೈತಿಕ ಪೊಲೀಸ್ ಗಿರಿ: ಐವರು ಅರೆಸ್ಟ್

ಬೆಂಗಳೂರು, ನೈತಿಕ ಪೊಲೀಸ್ ಗಿರಿ, ಐವರು, ಪೊಲೀಸರು, ಬಂಧನಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಅಪ್ರಾಪ್ತ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ.

ಮಹೀಮ್. ಆಫ್ರಿದಿ, ವಾಸೀಂ, ಅಂಜುಮ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಶನಿವಾರ ಸಂಜೆ ಸುವರ್ಣ ಲೇಔಟ್ ನ ಉದ್ಯಾನವನದಲ್ಲಿ ನೈತಿಕ ಪೊಲೀಸ್ ಗಿರಿ ನಡಿಸಿದ್ದರು. ಬುರ್ಖಾ ಧರಿಸಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಕುಳಿತಿದ್ದ ಯುವತಿಯನ್ನು ಬೆದರಿಸಿದ್ದರು.

ಯುವಕ, ಯುವತಿ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಬಂದ ಐವರು ಮುಸ್ಲಿಂ ಯುವಕರು ನಿಂದಿಸಿ, ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆಗೆ ಯಾಕೆ ಕುಳಿತು ಕೊಂಡಿದ್ದೀಯಾ? ನಿಮ್ಮ ಮನೆಯವರ ಫೋನ್ ನಂಬರ್ ಕೊಡು ಎಂದು ಬೆದರಿಸಿದ್ದರು. ಕ್ಯಾತೆ ತೆಗೆದು ಗಲಾಟೆ ಮಾಡಿದ್ದರು. ಅಲ್ಲದೆ, ಯುವಕನ ಮೇಲೆ ಹಲ್ಲೆಗೂ ಯತ್ನಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ಕ್ಲಾಸ್ಮೇಟ್ ಜೊತೆಗೆ ಮಾತನಾಡುತ್ತಿದ್ದೇನೆ ಎಂದು ಯುವತಿ ಹೇಳಿದರೂ ಕೇಳದೆ ಹಲ್ಲೆಗೆ ಯತ್ನಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಚಂದ್ರಾ ಲೇಔಟ್ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular