HomeLatest NewsBIG NEWS: ಪೋಕ್ಸೋ ಕೇಸ್ ನಿಂದ ಖುಲಾಸೆ: ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ

BIG NEWS: ಪೋಕ್ಸೋ ಕೇಸ್ ನಿಂದ ಖುಲಾಸೆ: ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ

ದಾವಣಗೆರೆ: ಪೋಕ್ಸೋ ಪ್ರಕರಣದ ಮೊದಲ ಕೇಸ್ ನಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಿರ್ದೋಷಿ ಎಂದು ಚಿತ್ರದುರ್ಗ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದಿಂದ ಖುಲಾಸೆಗೊಳಿಸಿದೆ.

ಪೋಕ್ಸೋ ಕೇಸ್ ನಲ್ಲಿ ಖುಲಾಸೆ ಬೆನ್ನಲ್ಲೇ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಘಾ ಶ್ರೀ, ನಾವು ಇನ್ನಷ್ಟು ದಿನಗಳ ಕಾಲ ಮೌನವಾಗಿರುತ್ತೇವೆ. ಈಗ ಮಾತನಾಡುವ ಸಮಯ ಕಡಿಮೆಯಿದೆ. ಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

ಎಲ್ಲರಿಗೂ ಸಂವಿಧಾನದ ದಿನದ ಶುಭಾಷಯಗಳು. ಈಗ ಯಾವುದೇ ಉತ್ತರ ನೀಡಲ್ಲ. ಮುಂದೆ ಮಾಧ್ಯಮಗೋಷ್ಠಿ ನಡೆಸಿ ಎಲ್ಲರನ್ನೂ ಕರೆದು ಮಾತನಾಡುತ್ತೇನೆ. ಈಗ ಇಷ್ಟು ಸಾಕು ಹೆಚ್ಚಿಗೆ ಮಾತನಡುವುದಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular