ಕೆನಡಾ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವುದು ಅನುಮಾನ ಎಂದು ಮೂಲಗಳು ತಿಳಿಸಿದೆ. ಹೌದು, ಮುಂಬರುವ G7 ಕೆನಾ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಕೆನಡಾಕ್ಕೆ ಭೇಟಿ ನೀಡುವ ಸಾಧ್ಯತೆ ಕಡಿಮ ಎಂದು ಹೇಳಲಾಗಿದೆ.
ಜೂನ್ 15-17 ರಿಂದ ಕೆನಡಾದಲ್ಲಿ ನಡೆಯಲಿರುವ ಶೃಂಗಸಭೆಗೆ ಭಾರತಕ್ಕೆ ಇನ್ನೂ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ, ಅಥವಾ ಭಾರತ ಕೂಡ ಭಾಗವಹಿಸಲು ಒಲವು ತೋರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
G7 ವಿಶ್ವದ ಅತ್ಯಂತ ಕೈಗಾರಿಕೀಕರಣಗೊಂಡ ಆರ್ಥಿಕತೆಗಳ ಅನೌಪಚಾರಿಕ ಗುಂಪಾಗಿದೆ – ಫ್ರಾನ್ಸ್, ಜರ್ಮನಿ, ಇಟಲಿ, ಯುನೈಟೆಡ್ ಕಿಂಗ್ಡಮ್, ಜಪಾನ್, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ. ಇದರಲ್ಲಿ ಯುರೋಪಿಯನ್ ಯೂನಿಯನ್ (EU), IMF, ವಿಶ್ವ ಬ್ಯಾಂಕ್ ಮತ್ತು ವಿಶ್ವಸಂಸ್ಥೆ ಕೂಡ ಭಾಗವಹಿಸುತ್ತವೆ. ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಆಸ್ಟ್ರೇಲಿಯಾ ಕೆನಡಾದಿಂದ ಆಹ್ವಾನಗಳನ್ನು ಸ್ವೀಕರಿಸಿವೆ ಎಂದು ವರದಿಯಾಗಿದ್ದರೂ, ಪ್ರಧಾನಿ ಮೋದಿಯವರ ಭೇಟಿಯ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.

