HomeIndiaಪ್ರಧಾನಿ ಮೋದಿಯವರಿಗಿಂದು ಜನ್ಮದಿನ: ಇಲ್ಲಿವೆ ‘ನಮೋ’ ಟಾಪ್​ ಲುಕ್​

ಪ್ರಧಾನಿ ಮೋದಿಯವರಿಗಿಂದು ಜನ್ಮದಿನ: ಇಲ್ಲಿವೆ ‘ನಮೋ’ ಟಾಪ್​ ಲುಕ್​

ಪ್ರಧಾನಿ ನರೇಂದ್ರ ಮೋದಿ ಫ್ಯಾಶನ್​ ಸೆನ್ಸ್​ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ . ಸಾಮಾನ್ಯವಾಗಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿಯನ್ನು ಸಾರುವಂತಹ ಉಡುಪುಗಳನ್ನೇ ಧರಿಸುತ್ತಾರೆ. ಸಾಂಸ್ಕೃತಿಕ ಉಡುಪುಗಳಿಗೆ ಮಾಡರ್ನ್​ ಲುಕ್​ ಕೊಟ್ಟು ಧರಿಸುವುದು ಸದ್ಯ ಮೋದಿ ಫ್ಯಾಶನ್​ ಸೆನ್ಸ್ ಆಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಜನಪ್ರಿಯ ನಾಯಕ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕಾರ್ಯಕ್ರಮಗಳಿಗೂ ಸೂಟ್​ ಆಗುವಂತಹ ಬಟ್ಟೆಗಳನ್ನೇ ಆಯ್ಕೆ ಮಾಡಿಕೊಳ್ತಾರೆ.

ಅಮೆರಿಕದ ಅಧ್ಯಕ್ಷ ಜೋ ಬಿಡೆನ್​ರನ್ನು ದೆಹಲಿಯಲ್ಲಿ ಸ್ವಾಗತಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಿಳಿ ಬಣ್ಣದ ಕುರ್ತಾ ಪೈಜಾಮಾ ಧರಿಸಿದ್ದರು. ತಿಳಿ ಬಣ್ಣದ ನೆಹರೂ ಜಾಕೆಟ್​ ಹಾಗೂ ಕಂದು ಬಣ್ಣದ ಶೂ ಈ ಲುಕ್​ಗೆ ಇನ್ನಷ್ಟು ಮೆರಗು ನೀಡಿದ್ದು ಸುಳ್ಳಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಆಕರ್ಷಕ ಉಡುಗೆಗಳನ್ನು ಧರಿಸಿ ಗಮನ ಸೆಳೆದಿದ್ದಾರೆ. ಬಿಳಿ ಬಣ್ಣದ ಕುರ್ತಾ ಪೈಜಾಮಾ, ಅದಕ್ಕೆ ತಕ್ಕುದಾದ ನೆಹರೂ ಜಾಕೆಟ್​ಗಳು, ಕಂದು ಬಣ್ಣದ ಶೂ ಹಾಗೂ ಜಿ 20 ಬ್ಯಾಡ್ಜ್​ ಮೂಲಕ ಮೋದಿ ಗಮನ ಸೆಳೆದಿದ್ದರು.

ಆಕಾಶ ಬಣ್ಣದ ಕುರ್ತಾ ಪೈಜಾಮಾದೊಂದಿಗೆ ಮೋದಿ ಧರಿಸಿದ್ದ ಕಡು ನೀಲಿ ಬಣ್ಣದ ನೆಹರೂ ಜಾಕೆಟ್​ ಕೂಡ ಮೋದಿಗೆ ಹೇಳಿ ಮಾಡಿಸಿದಂತೆ ಇತ್ತು. ದೀಪಾವಳಿ ಸಂದರ್ಭದಲ್ಲಿ ಕಾರ್ಗಿಲ್​ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಧರಿಸಿದ್ದ ಕಾರ್ಗೋ ಟ್ರಾಸರ್​ಗಳು ಹಾಗೂ ಜಾಕೆಟ್ , ಇಂಡಿಯನ್ ಆರ್ಮಿ ಕ್ಯಾಪ್​ ಸಖತ್​ ಟ್ರೆಂಡ್ ಕ್ರಿಯೇಟ್​ ಮಾಡಿತ್ತು.

ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಉಜ್ಜಿಯಿನಿಯಲ್ಲಿರುವ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಧಾನಿ ಮೋದಿ ಬಿಳಿ ಬಣ್ಣದ ಧೋತಿ ಧರಿಸಿ ಗಮನ ಸೆಳೆದಿದ್ದರು.

narendra-modi-birthday-special-top-fashion-moments-of-indias-most-stylish-prime-minister

7 times Prime Minister Narendra Modi impressed us with his outstanding  fashion sense | The Financial Express

PM Modi's Independence Day address crass election speech, blasts Congress |  Latest News India - Hindustan Times

PM Modi inaugurates Mahakal Lok corridor at Mahakaleshwar temple in Ujjain:  All you need to know | India News - Times of India

G20 Summit, PM Narendra Modi, Bharat, India: At G20 Summit Opening, PM  Modi's Nameplate Sends A Bharat Message

G20 Summit: PM Modi, Prez Biden hold bilateral talks; discuss technology,  democracy | Mint

कारगिल में गरजे पीएम मोदी, कहा कितना भी बड़ा लक्ष्य हो, भारत का अर्जुन  भेदेगा | pm modi diwali celebrate with indian army now this he select kargil  Kashmir | TV9 Bharatvarsh

 

 

For Latest News Updates, Join Our Whatsapp Community🚩
RELATED ARTICLES

Most Popular