HomeEntertainment'PK' ಬಳಿಕ ಮತ್ತೊಂದು ಚಿತ್ರಕ್ಕಾಗಿ ಒಂದಾಗಲಿದೆ ಅಮೀರ್ ಖಾನ್ - ಹಿರಾನಿ ಜೋಡಿ....!

‘PK’ ಬಳಿಕ ಮತ್ತೊಂದು ಚಿತ್ರಕ್ಕಾಗಿ ಒಂದಾಗಲಿದೆ ಅಮೀರ್ ಖಾನ್ – ಹಿರಾನಿ ಜೋಡಿ….!

ಬಾಲಿವುಡ್ ಚಿತ್ರರಂಗದ ಯಶಸ್ವಿ ನಿರ್ದೇಶಕ ರಾಜಕುಮಾರ್ ಹಿರಾನಿ, ‘ಮಿಸ್ಟರ್ ಪರ್ಫೆಕ್ಟ್’ ನಟ ಅಮೀರ್ ಖಾನ್ ಜೊತೆ 2009ರಲ್ಲಿ ‘ತ್ರೀ ಈಡಿಯಟ್ಸ್’ ಹಾಗೂ 2014ರಲ್ಲಿ ‘ಪಿಕೆ’ ಸಿನಿಮಾ ಮಾಡಿದ್ದು, ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದವು.

ಆ ಬಳಿಕ ಈ ಜೋಡಿ ಮತ್ತಾವುದೇ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಇದರ ಮಧ್ಯೆ ಅಮೀರ್ ಖಾನ್ ಕೊನೆಯದಾಗಿ ನಟಿಸಿದ್ದ ‘ಲಾಲ್ ಸಿಂಗ್ ಚಡ್ಡಾ’ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಯಶಸ್ಸು ಗಳಿಸಿರಲಿಲ್ಲ.

ಇದೀಗ ರಾಜಕುಮಾರ್ ಹಿರಾನಿ ಬಯೋಪಿಕ್ ಒಂದರ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕಾಗಿ ಅಮೀರ್ ಖಾನ್ ಅವರನ್ನು ಸಂಪರ್ಕಿಸಿದ್ದಾರಂತೆ. ಚಿತ್ರದ ಕಥೆ ಕೇಳಿದ ಅಮೀರ್ ಖಾನ್ ಕೂಡ ಹೊಸ ಪ್ರಾಜೆಕ್ಟ್ ಕುರಿತು ಉತ್ಸುಕತೆ ತೋರಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಜೋಡಿಯ ಮತ್ತೊಂದು ಚಿತ್ರವನ್ನು ಸಿನಿ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular