ಬೆಂಗಳೂರು: ಭಾರತೀಯರಿಗೆ ಚಿನ್ನವೆಂದರೆ ಕೇವಲ ಆಭರಣವಲ್ಲ, ಅದೊಂದು ಭರವಸೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಚಿನ್ನ ಖರೀದಿಸುವ ರೀತಿ ಬದಲಾಗಿದೆ. ನಿಮ್ಮ ಹೂಡಿಕೆಗೆ ಸಾಂಪ್ರದಾಯಿಕ ಆಭರಣ (Physical Gold) ಉತ್ತಮವೇ ಅಥವಾ ಡಿಜಿಟಲ್ ಗೋಲ್ಡ್ (Digital Gold) ಲಾಭದಾಯಕವೇ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಸುರಕ್ಷತೆ ಮತ್ತು ಶೇಖರಣೆ (Safety & Storage)
ಭೌತಿಕ ಚಿನ್ನ: ಮನೆಯಲ್ಲಿ ಇಟ್ಟರೆ ಕಳ್ಳತನದ ಭೀತಿ, ಬ್ಯಾಂಕ್ ಲಾಕರ್ನಲ್ಲಿ ಇಟ್ಟರೆ ಹೆಚ್ಚುವರಿ ಬಾಡಿಗೆಯ ಹೊರೆ.
ಡಿಜಿಟಲ್ ಚಿನ್ನ: ಕಳ್ಳತನದ ಭಯವೇ ಇಲ್ಲ ನೀವು ಕೊಂಡ ಚಿನ್ನ ಕಂಪನಿಯ ಸುರಕ್ಷಿತ ವಾಲ್ಟ್ಗಳಲ್ಲಿ (Vaults) ವಿಮೆಯೊಂದಿಗೆ ಭದ್ರವಾಗಿರುತ್ತದೆ. ಇದಕ್ಕೆ ನೀವು ಯಾವುದೇ ಶುಲ್ಕ ನೀಡಬೇಕಿಲ್ಲ.
ಮಾರಾಟ ಮತ್ತು ನಗದು ಪರಿವರ್ತನೆ (Liquidity)
ಭೌತಿಕ ಚಿನ್ನ: ತುರ್ತು ಹಣ ಬೇಕಾದಾಗ ಅಂಗಡಿಗೆ ಅಲೆಯಬೇಕು. ಹಳೆಯ ಚಿನ್ನವೆಂಬ ಕಾರಣಕ್ಕೆ ವೇಸ್ಟೇಜ್ ಹೆಸರಲ್ಲಿ 10-15% ಬೆಲೆ ಕಡಿತವಾಗುವ ಸಾಧ್ಯತೆ ಇರುತ್ತದೆ.
ಡಿಜಿಟಲ್ ಚಿನ್ನ: ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಒಂದೇ ಕ್ಲಿಕ್ನಲ್ಲಿ ಮಾರಾಟ ಮಾಡಬಹುದು. ಮಾರುಕಟ್ಟೆಯ ಲೈವ್ ದರಕ್ಕೆ ಅನುಗುಣವಾಗಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಹೂಡಿಕೆಯ ಮೊತ್ತ (Investment Amount)
ಭೌತಿಕ ಚಿನ್ನ: ಕನಿಷ್ಠ 1 ಗ್ರಾಂ ಚಿನ್ನ ಖರೀದಿಸಬೇಕೆಂದರೂ ಇಂದಿನ ಮಾರುಕಟ್ಟೆ ದರದಲ್ಲಿ ಸಾವಿರಾರು ರೂಪಾಯಿ ಬೇಕು.
ಡಿಜಿಟಲ್ ಚಿನ್ನ: ಇದರ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ನೀವು ಕೇವಲ ₹1, ₹10 ಅಥವಾ ₹100 ರಿಂದಲೂ ಹೂಡಿಕೆ ಆರಂಭಿಸಬಹುದು. ಸಣ್ಣ ಉಳಿತಾಯಗಾರರಿಗೆ ಇದು ವರದಾನ.
ಮೇಕಿಂಗ್ ಚಾರ್ಜ್ ಮತ್ತು ಶುದ್ಧತೆ (Purity & Charges)
ಭೌತಿಕ ಚಿನ್ನ: ಆಭರಣ ರೂಪದಲ್ಲಿ ಕೊಂಡಾಗ 10% ರಿಂದ 25% ವರೆಗೆ ‘ಮೇಕಿಂಗ್ ಚಾರ್ಜ್’ ನೀಡಬೇಕು. ಮಾರುವಾಗ ಈ ಹಣ ವಾಪಸ್ ಸಿಗುವುದಿಲ್ಲ.
ಡಿಜಿಟಲ್ ಚಿನ್ನ: ಇಲ್ಲಿ ಯಾವುದೇ ತಯಾರಿಕಾ ಶುಲ್ಕವಿಲ್ಲ. ಪ್ರತಿ ರೂಪಾಯಿಗೂ 24 ಕ್ಯಾರೆಟ್ (99.9% ಶುದ್ಧತೆ) ಚಿನ್ನವೇ ಸಿಗುತ್ತದೆ.
ಹೂಡಿಕೆದಾರರ ಗಮನಕ್ಕೆ: ಪ್ರಮುಖ ವ್ಯತ್ಯಾಸಗಳು
| ವಿಶೇಷತೆ | ಭೌತಿಕ ಚಿನ್ನ | ಡಿಜಿಟಲ್ ಚಿನ್ನ |
| ಶೇಖರಣೆ | ನಿಮ್ಮ ಜವಾಬ್ದಾರಿ (ಲಾಕರ್ ಅಗತ್ಯ) | ಮಾರಾಟಗಾರರ ಜವಾಬ್ದಾರಿ (ಸುರಕ್ಷಿತ ವಾಲ್ಟ್) |
| ಕನಿಷ್ಠ ಹೂಡಿಕೆ | ಕನಿಷ್ಠ 1 ಗ್ರಾಂ ಹಣ ಬೇಕು | ಕೇವಲ ₹100 ರಿಂದ ಆರಂಭಿಸಬಹುದು |
| ಶುದ್ಧತೆ | ನಾವು ಪರೀಕ್ಷಿಸಬೇಕು | 24K (99.9%) ಶುದ್ಧತೆಯ ಖಾತರಿ |
| ಮಾರಾಟ | ಅಂಗಡಿಗೆ ಹೋಗಬೇಕು | ಮೊಬೈಲ್ನಲ್ಲಿ ಒಂದೇ ಕ್ಲಿಕ್ |
| ನಿಯಂತ್ರಣ | ಭೌತಿಕ ಆಸ್ತಿ | ಸದ್ಯಕ್ಕೆ ಯಾವುದೇ ಸರ್ಕಾರಿ ನಿಯಂತ್ರಣವಿಲ್ಲ |

