HomeKarnatakaBIG NEWS: ಪಿಜಿಗಳಲ್ಲಿ ಕನ್ನ ಹಾಕುತ್ತಿದ್ದ ಮಹಿಳೆ ಬಂಧನ

BIG NEWS: ಪಿಜಿಗಳಲ್ಲಿ ಕನ್ನ ಹಾಕುತ್ತಿದ್ದ ಮಹಿಳೆ ಬಂಧನ

ಬೆಂಗಳೂರು: ಬೆಂಗಳೂರಿನ ಪಿಜಿಗಳಲ್ಲಿ ಕನ್ನಹಾಕಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮಹಿಳೆಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ವರಿ ಬಂಧಿತ ಮಹಿಳೆ. ಬಂಧಿತ ಆರೋಪಿಯಿಂದ 7.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಜಿಯಲ್ಲಿದ್ದುಕೊಂಡು ತನ್ನದೇ ಹೆಸರಿನ ಇನ್ನೋರ್ವ ಮಹಿಳೆಯ ಚಿನ್ನಾಭರಣಗಳನ್ನು ಕಳುವು ಮಡಿದ್ದಳು.

ಹಲಸೂರು ಗೇಟ್ ಬಳಿಯ ರಾಜೇಶ್ವರಿ ಪಿಜಿಯಲ್ಲಿ ವಾಸವಾಗಿದ್ದ ರಾಜೇಶ್ವರಿ ಎಂಬುವವರ ಚಿನ್ನಾಭರಣಗಳನ್ನು ಬಂಧಿತ ಮಹಿಳೆ ಕದ್ದಿದ್ದಳು. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular