HomeKarnatakaರಿಯಾಯಿತಿ ಅವಧಿ ಮತ್ತೆ ವಿಸ್ತರಿಸಿದ ನಂತರ ಭಾರಿ ದಂಡ ಸಂಗ್ರಹ

ರಿಯಾಯಿತಿ ಅವಧಿ ಮತ್ತೆ ವಿಸ್ತರಿಸಿದ ನಂತರ ಭಾರಿ ದಂಡ ಸಂಗ್ರಹ

ಬೆಂಗಳೂರು: ರಿಯಾಯಿತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸಲು ಅವಧಿಯನ್ನು ಮತ್ತೆ 15 ದಿನ ವಿಸ್ತರಣೆ ಮಾಡಲಾಗಿದ್ದು, ಭಾರಿ ಮೊತ್ತದ ದಂಡ ಸಂಗ್ರಹವಾಗಿದೆ.

ಸಂಚಾರ ದಂಡ ಬಾಕಿ ಪಾವತಿಸಲು ಶೇಕಡ 50 ರಷ್ಟು ರಿಯಾಯಿತಿ ನೀಡಿ ದಂಡ ಪಾವತಿಗೆ ಮೂರನೇ ಸಲ ಅವಧಿ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 4 ರಿಂದ 2,68,16,500 ರೂ.ದಂಡ ಪಾವತಿಸಲಾಗಿದೆ. ಕಳೆದ 4 ದಿನಗಳಲ್ಲಿ ಸುಮಾರು 93 ಸಾವಿರ ಕೇಸ್ ಇತ್ಯರ್ಥವಾಗಿವೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜನವರಿ 27 ರಂದು ನಡೆದ ವಿಚಾರಣೆಯ ನಂತರ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಶೇಕಡ 50 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಯಿತು. ಇದರ ಪ್ರಯೋಜನ ಪಡೆದು ಅನೇಕರು ಬಾಕಿ ಉಳಿಸಿಕೊಂಡ ದಂಡ ಪಾವತಿಸಿದ್ದಾರೆ. ಈ ಯೋಜನೆಯಡಿ ತಮ್ಮ ದಂಡವನ್ನು ಪಾವತಿಸಲು ಬಯಸುವ ಜನರು ಸ್ಥಳೀಯ ಸಂಚಾರ ಪೊಲೀಸ್ ಠಾಣೆಗೆ ಹೋಗಬಹುದು ಅಥವಾ ಕರ್ನಾಟಕ ಒನ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular