HomeKarnatakaಸಾರ್ವಜನಿಕರಿಗೆ ಗುಡ್ ನ್ಯೂಸ್: ಬಸ್ ಸೌಕರ್ಯದ ತೊಂದರೆ ಇದ್ದಲ್ಲಿ ಕರೆ ಮಾಡಿ

ಸಾರ್ವಜನಿಕರಿಗೆ ಗುಡ್ ನ್ಯೂಸ್: ಬಸ್ ಸೌಕರ್ಯದ ತೊಂದರೆ ಇದ್ದಲ್ಲಿ ಕರೆ ಮಾಡಿ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವತಿಯಿಂದ ಬಳ್ಳಾರಿ ಭಾಗದ ಸಾರ್ವಜನಿಕ ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸಲು ನ.4 ರಂದು ಮಧ್ಯಾಹ್ನ 3.30 ಗಂಟೆಯಿAದ ಸಂಜೆ 4.30 ಗಂಟೆಯವರೆಗೆ “ಪೋನ್ ಇನ್ ಕಾರ್ಯಕ್ರಮ” ಏರ್ಪಡಿಸಲಾಗಿದೆ.

ಬಳ್ಳಾರಿ ಭಾಗದ ಸಾರ್ವಜನಿಕ ಪ್ರಯಾಣಿಕರ ಬಸ್ ಸೌಕರ್ಯದ ಕುರಿತು ಕುಂದುಕೊರತೆ, ಸಮಸ್ಯೆಗಳಿದ್ದಲ್ಲಿ ಮೊ.7760992152, 6366423885 ಗೆ ಕರೆ ಮಾಡಿ ತಿಳಿಸಬಹುದು.

ಬಳ್ಳಾರಿ ವಿಭಾಗದ ವ್ಯಾಪ್ತಿಯಲ್ಲಿ ಪ್ರತಿ ತಿಂಗಳ ಒಂದನೇ ಸೋಮವಾರದಂದು ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಮತ್ತು ಸಂಡೂರು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರಯಾಣಿಕರ ಬಸ್ ಸೌಕರ್ಯದ ಕುರಿತು ಕುಂದು-ಕೊರತೆಗಳನ್ನು ಆಲಿಸಲು ‘ಪೋನ್ ಇನ್ ಕಾರ್ಯಕ್ರಮ’ ಆಯೋಜಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರ್ವಜನಿಕ ಪ್ರಯಾಣಿಕರ ಬಸ್ ಸೌಕರ್ಯದ ಕುರಿತು ಕುಂದು ಕೊರತೆಗಳಿದ್ದಲ್ಲಿ ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಪ್ರಯಾಣಿಕರು “ಪೋನ್ ಇನ್ ಕಾರ್ಯಕ್ರಮ ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular