HomeIndiaದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಊಟ ತಿನ್ನದಂತೆ ಮಕ್ಕಳ ತಡೆದ ಪೋಷಕರು; ಶಾಲೆಗೇ ಭೇಟಿ ನೀಡಿ...

ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಊಟ ತಿನ್ನದಂತೆ ಮಕ್ಕಳ ತಡೆದ ಪೋಷಕರು; ಶಾಲೆಗೇ ಭೇಟಿ ನೀಡಿ ಮಕ್ಕಳೊಂದಿಗೆ ಊಟ ಮಾಡಿದ ಸಂಸದೆ ಕನಿಮೋಳಿ

ಚೆನ್ನೈ: ದಲಿತ ಮಹಿಳೆಯೊಬ್ಬರು ತಯಾರಿಸಿದ ಆಹಾರವನ್ನು ತಿನ್ನಲು ತಮಿಳುನಾಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.

ಸ್ವಸಹಾಯ ಸಂಘದ ಸದಸ್ಯೆ ದಲಿತ ಮಹಿಳೆ ಮುನಿಯಸೆಲ್ವಿ ಅವರನ್ನು ಉಸಿಲಂಪಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆಯವರಾಗಿ ನೇಮಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಲೆಯಲ್ಲಿ ಹೆಚ್ಚುವರಿ ಆಹಾರದ ಬಗ್ಗೆ ಅಧಿಕಾರಿಗಳು ಮುನಿಯಸೆಲ್ವಿ ಅವರನ್ನು ಪ್ರಶ್ನಿಸಿದಾಗ, 11 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ತಾನು ತಯಾರಿಸಿದ ಉಪಹಾರವನ್ನು ತಿನ್ನಲು ನಿರಾಕರಿಸಿದ್ದಾರೆ. ಅವರ ಪೋಷಕರು ತಮ್ಮ ಜಾತಿಯ ಕಾರಣದಿಂದ ಊಟ ಮಾಡದಂತೆ ಮಕ್ಕಳಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ಪೊಲೀಸರೊಂದಿಗೆ ಪೋಷಕರನ್ನು ವಿಚಾರಿಸಿದ್ದು, ಜಿಲ್ಲಾ ಮಾಹಿತಿ ಸಂಗ್ರಹಣಾ ಅಧಿಕಾರಿಗೆ ವಿಷಯ ತಿಳಿದಿದೆ. ಡಿಎಂಕೆ ಸಚಿವರು ಮಧ್ಯಪ್ರವೇಶಿಸಿದ್ದಾರೆ. ಡಿಎಂಕೆ ಸಂಸದೆ ಕನಿಮೋಳಿ, ರಾಜ್ಯ ಸಚಿವೆ ಗೀತಾ ಜೀವನ್ ಮತ್ತು ಜಿಲ್ಲಾಧಿಕಾರಿ ಸೆಂಥಿಲ್ ರಾಜ್ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಉಪಹಾರ ಸೇವಿಸಿದ್ದಾರೆ. ಜಾತಿ ತಾರತಮ್ಯ ಮಾಡದಂತೆ ಪೋಷಕರಿಗೆ ತಿಳಿ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular