HomeKarnatakaಪೋಷಕರೇ ಗಮನಿಸಿ : `ನವೋದಯ ಪ್ರವೇಶ ಪರೀಕ್ಷೆ’ಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪೋಷಕರೇ ಗಮನಿಸಿ : `ನವೋದಯ ಪ್ರವೇಶ ಪರೀಕ್ಷೆ’ಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು : ಜವಾಹರ ನವೋದಯ ವಿದ್ಯಾಲಯದ 2024-25 ಸಾಲಿನಲ್ಲಿ 6ನೇ ತರಗತಿಯ ಆಯ್ಕೆಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.

ಆಸಕ್ತ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ನವೋದಯ ವಿದ್ಯಾಲಯ ಸಮಿತಿಯ ಜಾಲತಾಣ  www.navodaya.gov.in ಮುಖಾಂತರ ಸಲ್ಲಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿಯಲ್ಲಿ ತಿದ್ದುಪಡಿಗೆ ಅವಕಾಶ: ಅರ್ಜಿ ಸಲ್ಲಿಸಿದ ಮಾಹಿತಿಯಲ್ಲಿ ಗಂಡು ಅಥವಾ ಹೆಣ್ಣು ಜಾತಿ ಬದಲಾವಣೆಗಳಾದ ಸಾಮಾನ್ಯ, ಹಿಂದುಳಿದ, ಇತರೆ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಗ್ರಾಮೀಣ ಅಥವಾ ನಗರ, ಅಂಗವಿಕಲತೆ ಮತ್ತು ಪರೀಕ್ಷೆ ಬರೆಯುವ ಮಾಧ್ಯಮದಲ್ಲಿ ಏನಾದರೂ ವ್ಯತ್ಯಾಸವಿದ್ದರೆ ತಿದ್ದುಪಡಿ ಮಾಡಲು ಸೆಪ್ಟೆಂಬರ್ 01 ಮತ್ತು 02ರಂದು ಅವಕಾಶ ನಿಗದಿಪಡಿಸಲಾಗಿದೆ ಎಂದು ಜವಾಹರ ನವೋದಯ ವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular