HomeKarnatakaಮರು ಜೀವ ಬರುತ್ತದೆ ಎಂದು ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯೊಳಗಿಟ್ಟ ಪೋಷಕರು

ಮರು ಜೀವ ಬರುತ್ತದೆ ಎಂದು ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯೊಳಗಿಟ್ಟ ಪೋಷಕರು

ಹಾವೇರಿ: ನೀರಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿ ಇಟ್ಟ ಘಟನೆ ಹಾವೇರಿಯಲ್ಲಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹೇಮಂತ್(12), ನಾಗರಾಜ್(11) ಮೃತಪಟ್ಟ ಬಾಲಕರು. ಇವರ ಮೃತ ದೇಹಗಳನ್ನು ನೀರಿನಿಂದ ಹೊರ ತೆಗೆದ ನಂತರ ಪೋಷಕರು ಉಪ್ಪಿನ ರಾಶಿಯಲ್ಲಿ ಆರು ಗಂಟೆಗಳ ಕಾಲ ಇಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿ ನಾಲ್ಕೈದು ಗಂಟೆ ಇಟ್ಟರೆ ಮತ್ತೆ ಬದುಕಿ ಬರುತ್ತಾರೆ ಎನ್ನುವ ವಿಡಿಯೋ ನೋಡಿ ಈ ರೀತಿ ಮಾಡಿದ್ದಾರೆ. ಮಕ್ಕಳಿಗೆ ಜೀವ ಬರುವುದಿಲ್ಲ ಎಂದು ಪೋಷಕರಿಗೆ ಪೊಲೀಸರು ಮನವರಿಕೆ ಮಾಡಿ ಕೊಟ್ಟಿದ್ದಾರೆ. ನಂತರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular