
ಹೌದು, 29 ವರ್ಷಗಳ ಹಿಂದೆ ತಾವು ಚಾಲನೆ ಮಾಡುತ್ತಿದ್ದ ಬಸ್ ಅನ್ನು ಎಮ್ಮೆಗೆ ಡಿಕ್ಕಿ ಹೊಡೆಸಿ ಅದರ ಸಾವಿಗೆ ಕಾರಣನಾಗಿದ್ದ ಉತ್ತರ ಪ್ರದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕ ಅಚ್ಚನ್ ಮಿಯಾನ್ ಎಂಬವರಿಗೆ ವಿಚಾರಣೆಗೆ ಹಾಜರಾಗುವಂತೆ ಈಗ ನ್ಯಾಯಾಲಯದ ಸಮನ್ಸ್ ತಲುಪಿದೆ.
ಬಾರಾಬಂಕಿ ನಿವಾಸಿಯಾಗಿರುವ ಅಚ್ಚನ್ ಮಿಯಾನ್ ಅವರಿಗೆ ಈಗ 83 ವರ್ಷ ವಯಸ್ಸು. ಅಲ್ಲದೆ ಪಾರ್ಶ್ವವಾಯುವಿನಿಂದಲೂ ಬಳಲುತ್ತಿದ್ದಾರೆ. ಇದೀಗ ಬರೇಲಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪೊಲೀಸರು ತಿಳಿಸಿದ್ದು, ಇಲ್ಲವಾದರೆ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಪ್ರಕರಣ ಕೈ ಬಿಟ್ಟಿರಬೇಕು ಎಂದು ಭಾವಿಸಿದ್ದ ಅಚ್ಚನ್ ಮಿಯಾನ್ ಅವರಿಗೆ ಈಗ ಆಘಾತವಾಗಿದ್ದು, ಈ ವಯಸ್ಸಿನಲ್ಲಿ ನಾನು ಹೇಗೆ ಕಾನೂನು ಹೋರಾಟ ನಡೆಸಲಿ ಎಂದು ಕಣ್ಣೀರಿಟ್ಟಿದ್ದಾರೆ.

