HomeLatest Newsಆಪ್ಘನ್ ತೈಲ ಸಂಗ್ರಹಣಾ ಘಟಕದ ಮೇಲೆ ಪಾಕಿಸ್ತಾನ ಬಾಂಬ್ ದಾಳಿ

ಆಪ್ಘನ್ ತೈಲ ಸಂಗ್ರಹಣಾ ಘಟಕದ ಮೇಲೆ ಪಾಕಿಸ್ತಾನ ಬಾಂಬ್ ದಾಳಿ

ಕಾಬೂಲ್: ಅಪ್ಘಾನಿಸ್ತಾನ ತೈಲ ಸಂಗ್ರಹಣಾ ಘಟಕದ ಮೇಲೆ ಪಾಕಿಸ್ತಾನ ಬಾಅಂಬ್ ದಾಳಿ ನಡೆಸಿದೆ. ಈ ಬಗ್ಗೆ ತಾಲಿಬಾನ್ ಸರ್ಕಾರ ಮಾಹಿತಿ ನೀಡಿದೆ.

ಕಂದಹಾರ್ ವಿಮಾನ ನಿಲ್ದಾಣದ ಬಳಿಯಿರುವ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ತೈಲ ಸಂಗ್ರಹಣಾ ಘಟಕ ಇದಾಗಿದೆ. ಚೀನಾದ ಸಂಧಾನ ಪ್ರಯತ್ನದ ನಡುವೆಯೂ ಎರಡೂ ದೇಶಗಳ ಸಂಘರ್ಷ ತೀವ್ರಗೊಂಡಿದೆ.

ರಾಜಧಾನಿ ಕಾಬೂಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದ್ದು, ಕೆಲವೆಡೆ ನಾಗರಿಕರ ಮನೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಕಿಸ್ತಾನದ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡುವುದಾಗಿ ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ತಿಳಿಸಿದ್ದಾರೆ.

ಈ ನಡುವೆ ಕಾಬೂಲ್, ಕಂದಹಾರ್, ಪಕ್ತಿಯಾ ಪ್ರಾಂತ್ಯದ ನಾಲ್ಕು ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಪಾಕಿಸ್ತಾನ ಭದ್ರತಾ ಮೂಲಗಳು ತಿಳಿಸಿವೆ. ಇದರಲ್ಲಿ ಕಂದಹಾರ್ ವಿಮಾನ ನಿಲ್ದಾಣದ ತೈಲ ಸಂಗ್ರಹಣಾ ಕೇಂದ್ರವೂ ಸೇರಿದೆ ಎಂದು ವರದಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular