HomeLatest NewsT20 World Cup 2026: ಪಾಕಿಸ್ತಾನ ಸೂಪರ್ 8 ಪ್ರವೇಶಿಸಲು ಇರುವುದು ಇದೊಂದೇ ದಾರಿ; ತಪ್ಪು...

T20 World Cup 2026: ಪಾಕಿಸ್ತಾನ ಸೂಪರ್ 8 ಪ್ರವೇಶಿಸಲು ಇರುವುದು ಇದೊಂದೇ ದಾರಿ; ತಪ್ಪು ಮಾಡಿದ್ರೆ ಮನೆಗೆ!

ಟಿ20 ವಿಶ್ವಕಪ್ 2026ರ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವು ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂದು ಅಂದರೆ ಫೆಬ್ರವರಿ 18ರ ಬುಧವಾರದಂದು ಕೊಲಂಬೋದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಪಾಕಿಸ್ತಾನ ಮತ್ತು ನಮೀಬಿಯಾ ತಂಡಗಳು ಮುಖಾಮುಖಿಯಾಗುತ್ತಿವೆ. ಸಲ್ಮಾನ್ ಆಗಾ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಇದು ಗುಂಪು ಹಂತದ ಕೊನೆಯ ಮತ್ತು ನಿರ್ಣಾಯಕ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಸೋತರೆ ಪಾಕಿಸ್ತಾನ ತಂಡವು ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಸೂಪರ್ 8 ಹಾದಿ ಕಠಿಣವಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಅಮೆರಿಕಾ ತಂಡವು ಉತ್ತಮ ರನ್ ರೇಟ್ ಹೊಂದಿದ್ದು, ಪಾಕಿಸ್ತಾನ ತಂಡವು ನಮೀಬಿಯಾವನ್ನು ಸೋಲಿಸಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಇಂದು ಪಾಕಿಸ್ತಾನ ತಂಡವು ಸೋಲನುಭವಿಸಿದರೆ ಅಮೆರಿಕಾ ತಂಡವು ಸುಲಭವಾಗಿ ಮುಂದಿನ ಹಂತಕ್ಕೆ ಲಗ್ಗೆ ಇಡಲಿದೆ. ನಮೀಬಿಯಾ ತಂಡವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದರೂ, ಪಾಕಿಸ್ತಾನದಂತಹ ದೊಡ್ಡ ತಂಡಕ್ಕೆ ಶಾಕ್ ನೀಡಿ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಲು ಸಿದ್ಧತೆ ನಡೆಸಿದೆ.

ಕೊಲಂಬೋದ ಈ ಮೈದಾನವು ಬ್ಯಾಟಿಂಗ್‌ಗೆ ಪೂರಕವಾಗಿದ್ದು, ಹೆಚ್ಚಿನ ಮೊತ್ತ ದಾಖಲಾಗುವ ಸಾಧ್ಯತೆ ಇದೆ. ಪಾಕಿಸ್ತಾನ ತಂಡದ ಪರವಾಗಿ ಆರಂಭಿಕ ಬ್ಯಾಟರ್‌ಗಳಾದ ಸೈಮ್ ಅಯೂಬ್ ಮತ್ತು ಸಾಹಿಬ್ಜಾದಾ ಫರ್ಹಾನ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಈಗಾಗಲೇ ತಂಡದ ಸಭೆ ನಡೆಸಲಾಗಿದ್ದು, ಭಾರತದ ವಿರುದ್ಧದ ಪಂದ್ಯದಲ್ಲಿ ನಡೆದ ತಪ್ಪುಗಳನ್ನು ಚರ್ಚಿಸಲಾಗಿದೆ. ಮುಂದಿನ ಪಂದ್ಯಗಳಲ್ಲಿ ಅಂತಹ ತಪ್ಪುಗಳು ಮರುಕಳಿಸದಂತೆ ಹೊಸ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಉಸ್ಮಾನ್ ತಿಳಿಸಿದ್ದಾರೆ. ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಈಗಾಗಲೇ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿರುವ ದಕ್ಷಿಣ ಆಫ್ರಿಕಾ ತಂಡವು ಯುಎಇ ತಂಡವನ್ನು ಎದುರಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular