HomeLatest NewsBIG NEWS : ಪಹಲ್ಗಾಮ್ ಉಗ್ರರ ದಾಳಿ : 150 ಕನ್ನಡಿಗರನ್ನು ಹೊತ್ತ ವಿಮಾನ ಜಮ್ಮು-...

BIG NEWS : ಪಹಲ್ಗಾಮ್ ಉಗ್ರರ ದಾಳಿ : 150 ಕನ್ನಡಿಗರನ್ನು ಹೊತ್ತ ವಿಮಾನ ಜಮ್ಮು- ಕಾಶ್ಮೀರದಿಂದ ಇಂದು ಬೆಂಗಳೂರಿಗೆ |Pahalgam Terrorist Attack

ಬೆಂಗಳೂರು : 150 ಕನ್ನಡಿಗರನ್ನು ಹೊತ್ತ ವಿಮಾನ ಜಮ್ಮು- ಕಾಶ್ಮೀರದಿಂದ ಇಂದು ಬೆಂಗಳೂರಿಗೆ ಆಗಮಿಸಲಿದೆ.

ಕಾಶ್ಮೀರದ ವಿವಿಧ ಭಾಗಗಳಲ್ಲಿರುವ ಕರ್ನಾಟಕದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಚಿವ ಸಂತೋಷ್ ಲಾಡ್ ನಿನ್ನೆ ಕಾಶ್ಮೀರಕ್ಕೆ ಆಗಮಿಸಿದ್ದರು.

ಕಾಶ್ಮೀರದಲ್ಲಿ ನಡೆದ ಈ ಭೀಭತ್ಸಕರ ದಾಳಿಯಲ್ಲಿ ಅಮಾನುಷವಾಗಿ ಹತ್ಯೆಯಾದ ಕುಟುಂಬಗಳ ನೋವು, ಸಂಕಟ ಯಾವ ಪಾಪಿಗೂ ಬೇಡ. ಇಂತಹ ಹಲವು ಸಂಕಟಗಳ ಆರ್ತನಾದಗಳಿಗೆ ಇವತ್ತು ಸಾಕ್ಷಿಯಾಗಿದ್ದೇನೆ. ಅವರಿಗೆ ಸಮಾಧಾನ ಹೇಳಬೇಕೋ? ಧೈರ್ಯ ತುಂಬಬೇಕೋ? ಅಸಲಿಗೆ ನಾನೇ ಭಾವುಕನಾಗಿದ್ದೆ! ಇವೆಲ್ಲವುದರ ನಡುವೆಯೂ ಸಾವಿಗೀಡಾದ ಮೂರೂ ಜನ ಕನ್ನಡಿಗರ ಮೃತದೇಹಗಳನ್ನು ಅವರ ಕುಟುಂಬಗಳ ಸಮೇತ ನಾಡಿಗೆ ರವಾನೆ ಮಾಡಲಾಗಿದೆ. ಅಲ್ಲಿ ಮುಂದಿನ ಕಾರ್ಯಗಳ ವ್ಯವಸ್ಥೆಯಾಗಲಿವೆ. ಕಾಶ್ಮೀರದ ವಿವಿಧ ಭಾಗಗಳಲ್ಲಿರುವ ಕರ್ನಾಟಕದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಆದಷ್ಟು ಬೇಗ ಅವರನ್ನೆಲ್ಲ ಮರಳಿ ನಾಡಿಗೆ ರಾಜ್ಯ ಸರ್ಕಾರ ಕರೆತರಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಪ್ರವಾಸಿಗರ ಪಾರ್ಥಿವ ಶರೀರ ಈಗಾಗಲೇ ಅವರ ಸ್ವಗೃಹಕ್ಕೆ ಆಗಮಿಸಿದೆ. ಕಾಶ್ಮೀರದ ವಿವಿಧೆಡೆ ಸಿಲುಕಿರುವ ರಾಜ್ಯದ ಪ್ರವಾಸಿಗರನ್ನು ಸಹ ಮರಳಿ ನಾಡಿಗೆ ಕರೆತರುವ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular