HomeBusinessBIG NEWS: ಫಾಸ್ಟ್ಯಾಗ್ ಮೂಲಕ 36,000 ಕೋಟಿ ರೂ. ಟೋಲ್ ಶುಲ್ಕ ಸಂಗ್ರಹ: 60 ಕಿಮೀ...

BIG NEWS: ಫಾಸ್ಟ್ಯಾಗ್ ಮೂಲಕ 36,000 ಕೋಟಿ ರೂ. ಟೋಲ್ ಶುಲ್ಕ ಸಂಗ್ರಹ: 60 ಕಿಮೀ ವ್ಯಾಪ್ತಿಯಲ್ಲಿ ಟೋಲ್ ವಿನಾಯಿತಿ ಇಲ್ಲ: ಗಡ್ಕರಿ ಮಾಹಿತಿ

ನವದೆಹಲಿ: ನವೆಂಬರ್ 2023 ರವರೆಗೆ ಫಾಸ್ಟ್ಯಾಗ್ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವಾಗಿ 36,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲಿಖಿತ ಉತ್ತರ ನೀಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಕಳೆದ ತಿಂಗಳವರೆಗೆ ಫಾಸ್ಟ್ಯಾಗ್ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವಾಗಿ 36 ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತುತ ಶೇ. 98.9 ಟೋಲ್ ಶುಲ್ಕವನ್ನು ಫಾಸ್ಟ್‌ ಟ್ಯಾಗ್ ಮೂಲಕ ಮಾಡಲಾಗಿದೆ. 60 ಕಿಲೋಮೀಟರ್ ದೂರದೊಳಗಿನ ಶುಲ್ಕ ಪ್ಲಾಜಾಗಳಲ್ಲಿ ಬಳಕೆದಾರರ ಶುಲ್ಕ(ಟೋಲ್) ವಿನಾಯಿತಿಗೆ ಯಾವುದೇ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

ಫಾಸ್ಟ್‌ ಟ್ಯಾಗ್ ಅಳವಡಿಸದ ವಾಹನಗಳು ಅಥವಾ ಮಾನ್ಯ ಮತ್ತು ಕ್ರಿಯಾತ್ಮಕ ಫಾಸ್ಟ್‌ ಟ್ಯಾಗ್ ಇಲ್ಲದ ವಾಹನಗಳು ಅನ್ವಯಿಸುವ ಶುಲ್ಕದ ಎರಡು ಪಟ್ಟು ಸಮಾನವಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದ ಸುಮಾರು ಒಂದು ಲಕ್ಷ 46 ಸಾವಿರ ಕಿಲೋಮೀಟರ್ ಎಂದು ಸಚಿವರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular