HomeKarnatakaScholarship : ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

Scholarship : ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ಎಸ್‌ಎಸ್‌ಪಿ ಪೋರ್ಟಲ್ ನಲ್ಲಿ 1 ರಿಂದ 8ನೇ ತರಗತಿಯ ಮೆಟ್ರಿಕ್ ಪೂರ್ವ ಹಾಗೂ ಶುಲ್ಕ ಮರುಪಾವತಿ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ಧರ್ಮದ ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿರುತ್ತದೆ.ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ‘ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನ ಆಜಾದ್ ಭವನ, ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರ, ಬಳ್ಳಾರಿ’ ಇಲ್ಲಿಗೆ ನೇರವಾಗಿ ಭೇಟಿ ನೀಡಬಹುದು.

*ಸಹಾಯವಾಣಿ ಸಂಖ್ಯೆ:*

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳ್ಳಾರಿ ಜಿಲ್ಲಾ/ತಾಲ್ಲೂಕು ಮಾಹಿತಿ ಕೇಂದ್ರ: 08392-200125 / 224 ಮತ್ತು 8310321101

ಸಿರುಗುಪ್ಪ ತಾಲ್ಲೂಕು: 9148889975

ಸಂಡೂರು ತಾಲ್ಲೂಕು: 9036925966

ಅರ್ಹ ವಿದ್ಯಾರ್ಥಿಗಳು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಡೆಂಗ್ಯು ನಿಯಂತ್ರಣಕ್ಕೆ 50 ಸ್ವಯಂ ಸೇವಕರ ನೇಮಕ: ಅರ್ಜಿ ಆಹ್ವಾನ

ಪ್ರಸ್ತಕ ಸಾಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ‘ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ’ದಡಿ ಬಳ್ಳಾರಿ ನಗರ ಪ್ರದೇಶದಲ್ಲಿ ಡೆಂಗ್ಯು ರೋಗ ನಿಯಂತ್ರಣ ಚಟುವಟಿಕೆಯಾದ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯ ಹಾಗೂ ಸಮೀಕ್ಷೆಯನ್ನು ನಡೆಸಲು 50 ಸ್ವಯಂ ಸೇವಕರ ಸೇವೆಯ ಅವಶ್ಯಕತೆ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

*ಅರ್ಹತೆ:*

ಅಭ್ಯರ್ಥಿಗಳು ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾಹರ್ಹತೆಯನ್ನು ಹೊಂದಿರಬೇಕು. ಲಾರ್ವಾ ಸಮೀಕ್ಷೆ ಚಟುವಟಿಕೆಯ ನಮೂನೆಯನ್ನು ಭರ್ತಿ ಮಾಡಲು ಶಕ್ತರಾಗಿರಬೇಕು. ಕ್ರಿಯಾ ಯೋಜನೆಯ ಅನುಸಾರ ವೇಳಾಪಟ್ಟಿಯಂತೆ ತಪ್ಪದೇ ಎಲ್ಲಾ ಚಟುವಟಿಕೆಗಳಿಗೆ ಹಾಜರಾಗಬೇಕು. ಒಂದು ದಿನಕ್ಕೆ ಕನಿಷ್ಠ 60 ರಿಂದ 65 ಆವರಣಗಳನ್ನು (ಮನೆ, ಕಚೇರಿ, ಆಸ್ಪತ್ರೆ, ಶಾಲೆ, ಕಾಲೇಜು ಇತ್ಯಾದಿ) ಸಂದರ್ಶಿಸಿ, ಈಡೀಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಯನ್ನು ನಡೆಸಬೇಕು.

ದೈನಂದಿನ ಹಾಜರಿ ಮತ್ತು ಸಮೀಕ್ಷೆಯ ಜಿಯೋಟ್ಯಾಗ್ ಫೋಟೋಗಳೊಂದಿಗೆ ನಿಗದಿತ ವರದಿಯನ್ನು ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಪ್ರತಿ ಸ್ವಯಂ ಸೇವಕರಿಗೆ ಸೇವೆಯನ್ನು ಗರಿಷ್ಠ 100 ದಿನಗಳಿಗೆ ನಿಗದಿಪಡಿಸಲಾಗಿರುತ್ತದೆ. ಸ್ವಯಂ ಸೇವಕರಿಗೆ ನಿಗದಿಪಡಿಸಿರುವ ಗೌರವಧನವನ್ನು ಪ್ರತಿ ದಿನ ಒಂದಕ್ಕೆ ರೂ. 400 ಗಳಂತೆ ನಿಯಮಾನುಸಾರ ಪಾವತಿಸಲಾಗುವುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ. 08392294610 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಬಿಡಿಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular