
ಒಂದು ಕಪ್ ಕಡಲೇಬೇಳೆಯನ್ನು 5-6 ಗಂಟೆಗಳ ಕಾಲ ಚೆನ್ನಾಗಿ ನೆನೆಸಿ. ಇದನ್ನ ಕುಕ್ಕರಿನಲ್ಲಿ ಬೇಯಿಸದೆ, ಪಾತ್ರೆಯಲ್ಲಿ ಮೃದುವಾಗಿ ಬೇಯಿಸಿ. ಒಂದು ಕಪ್ ಬೆಲ್ಲವನ್ನು ಪಾತ್ರೆಯಲ್ಲಿ ಕರಗಿಸಿ ಒಂದೆಳೆ ಪಾಕ ಮಾಡಿಕೊಳ್ಳಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕೂಡಿಸಿ.
ಈಗ ಬೇಯಿಸಿರುವ ಕಡಲೇಬೇಳೆಯನ್ನು ಬೆಲ್ಲದ ಮಿಶ್ರಣಕ್ಕೆ ಹಾಕಿ 3-4 ನಿಮಿಷ ಮಂದ ಉರಿಯಲ್ಲಿ ಚೆನ್ನಾಗಿ ತಿರುಗಿಸಿ ಕೆಳಗಿಳಿಸಿ. ಬಾಣಲೆಗೆ ತುಪ್ಪ ಹಾಕಿ, ದ್ರಾಕ್ಷಿ ಗೋಡಂಬಿಯನ್ನು ಕೆಂಪಗೆ ಹುರಿದು, ಕೊನೆಯದಾಗಿ ಸಿದ್ಧವಿರುವ ಬೆಲ್ಲ, ಕಡಲೆಬೇಳೆಯ ಮಿಶ್ರಣದ ಜೊತೆ ಸೇರಿಸಿದರೆ ಘಮ ಘಮ ಎನ್ನುವ ಹಯಗ್ರೀವ ಸವಿಯಬಹುದು.

