HomeBeautyತುಟಿಯ ಅಂದ ಹೆಚ್ಚಿಸಲು ಬಳಸಿ ಅಡುಗೆ ಮನೆಯಲ್ಲೇ ಇರುವ ಈ ವಸ್ತು

ತುಟಿಯ ಅಂದ ಹೆಚ್ಚಿಸಲು ಬಳಸಿ ಅಡುಗೆ ಮನೆಯಲ್ಲೇ ಇರುವ ಈ ವಸ್ತು

ಚಳಿಗಾಲದಲ್ಲಿ ಒಡೆಯುವ ತ್ವಚೆಯ ಸಮಸ್ಯೆಯಿಂದ ಮುಕ್ತಿ ನೀಡಿ ನಿಮ್ಮತುಟಿಗಳ ಅಂದವನ್ನು ಹೆಚ್ಚಿಸುವ ಕೆಲವು ವಸ್ತುಗಳು ಅಡುಗೆ ಮನೆಯಲ್ಲೇ ಇವೆ. ಅವುಗಳು ಯಾವುವು ಎಂದಿರಾ?

ನಿತ್ಯ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ತುಟಿಗೆ ಮಸಾಜ್ ರೂಪದಲ್ಲಿ ಹಚ್ಚಿಕೊಂಡರೆ ತುಟಿ ಮೃದುವಾಗಿ ಹೊಳಪು ಪಡೆದುಕೊಳ್ಳುತ್ತದೆ. ಬೆಣ್ಣೆ ಅಥವಾ ತುಪ್ಪವನ್ನು ಹಚ್ಚುವುದರಿಂದ ತುಟಿ ಗುಲಾಬಿ ಬಣ್ಣಕ್ಕೂ ತಿರುಗುತ್ತದೆ. ಬೆಣ್ಣೆಯನ್ನು ಹಿಮ್ಮಡಿ ಕಾಲಿನ ಒಡಕಿಗೂ ಔಷಧವಾಗಿ ಬಳಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚು ಮಸಾಲೆಯುಕ್ತ ವಸ್ತುಗಳನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಿ ತುಟಿಯ ಸಿಪ್ಪೆ ಏಳಬಹುದು. ಹಾಗಾಗಿ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ತಪ್ಪದೆ ಕುಡಿಯಿರಿ. ಇದರಿಂದ ತುಟಿ ಒಣಗುವ ಹಾಗೂ ಒಡೆಯುವ ಸಮಸ್ಯೆ ದೂರವಾಗುತ್ತದೆ.

ಕ್ರೀಮ್ ಬಳಸುವುದು ಅನಿವಾರ್ಯವಾದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಿ. ವ್ಯಾಸಲಿನ್, ಬಯೋಲಿನ್ ನಂಥ ಉತ್ಪನ್ನಗಳನ್ನು ಬಳಸುವುದರಿಂದ ಅದು ದೀರ್ಘಕಾಲ ತುಟಿಗೆ ತೇವಾಂಶ ಲಭ್ಯವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular