HomeInternationalBREAKING NEWS: ತೈಲ ಟ್ಯಾಂಕರ್ ಸ್ಫೋಟ: 94 ಜನರು ದುರ್ಮರಣ; 50ಕ್ಕೂ ಹೆಚ್ಚು ಜನರ ಸ್ಥಿತಿ...

BREAKING NEWS: ತೈಲ ಟ್ಯಾಂಕರ್ ಸ್ಫೋಟ: 94 ಜನರು ದುರ್ಮರಣ; 50ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಕಾನೊ: ತೈಲ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 94 ಜನರು ಸಾವನ್ನಪ್ಪಿದ್ದು , 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ನೈಜಿರಿಯಾದಲ್ಲಿ ನಡೆದಿದೆ.

ಉತ್ತರ ನೈಜಿರಿಯದ ಜಿಗಾವಾ ರಾಜ್ಯದ ಟೌರಾ ಸರ್ಕಾರಿ ಪ್ರದೇಶದ ಮಜಿಯಾ ಎಂಬ ಪಟ್ಟಣದಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

94 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ರಕ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟ್ಯಾಂಕರ್ ಪಲ್ಟಿಯಾಗಿದ್ದು, ಸ್ಫೊಟಗೊಂಡಿದೆ. ಘಟನೆ ಬಳಿಕ ಚಲ್ಲಿದ ತೈಲ ಸಂಗ್ರಹಕ್ಕೆ ಸ್ಥಳೀಯರು ಮುಗಿಬಿದ್ದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular